September 29, 2026
Tuesday, September 29, 2026
spot_img

ಪಲ್ಯ, ಗ್ರೇವಿ & More 82 | ಕೇವಲ 5 ನಿಮಿಷಗಳಲ್ಲಿ ಮಾಡಿ ಸೂಪರ್ ಟೇಸ್ಟಿ ಟೊಮೆಟೊ ಕಾಯಿ ಚಟ್ನಿ

ಟೊಮೆಟೊ ಚಟ್ನಿಯು ಹುಳಿ, ಉಪ್ಪು, ಖಾರದಿಂದ ಕೂಡಿದ್ದು, ಅದ್ಭುತ ರುಚಿಯನ್ನು ನೀಡುತ್ತದೆ. ಟೊಮೆಟೊದಲ್ಲಿರುವ ವಿಟಮಿನ್ ಸಿ ಮತ್ತು ತೆಂಗಿನಕಾಯಿಯಲ್ಲಿರುವ ಆರೋಗ್ಯಕರ ಕೊಬ್ಬು ದೇಹಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದನ್ನು ಕೇವಲ 5-10 ನಿಮಿಷಗಳಲ್ಲಿ ತಯಾರಿಸಬಹುದು

ಬೇಕಾಗುವ ಸಾಮಾಗ್ರಿಗಳು:
ಟೊಮೆಟೊ ಕಾಯಿ
ತೆಂಗಿನಕಾಯಿ
ಹಸಿ ಮೆಣಸಿನಕಾಯಿ
ಬೆಳ್ಳುಳ್ಳಿ
ಕಡಲೆಬೇಳೆ
ಉದ್ದಿನಬೇಳೆ
ಜೀರಿಗೆ
ಹುಣಸೆಹಣ್ಣು:
ಉಪ್ಪು
ಎಣ್ಣೆ
ಸಾಸಿವೆ
ಒಣ ಮೆಣಸಿನಕಾಯಿ
ಕರಿಬೇವು

ತಯಾರಿಸುವ ವಿಧಾನ:
ಮೊದಲು ಟೊಮೆಟೊ ಕಾಯಿಯನ್ನು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಟೊಮೆಟೊಗಳನ್ನು ಹಾಕಿ ಅವು ಮೃದುವಾಗುವವರೆಗೆ ಹುರಿದುಕೊಳ್ಳಬೇಕು. ಬಳಿಕ ಅದೇ ಬಾಣಲೆಯಲ್ಲಿ ಮತ್ತೊಂದು ಚಮಚ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಕೆಂಪಾಗುವವರೆಗೆ ಹುರಿದುಕೊಂಡು, ಆ ಮಿಶ್ರಣ ತಣ್ಣಗಾದ ಮೇಲೆ, ಅದನ್ನು ಮಿಕ್ಸಿ ಜಾರ್‌ಗೆ ಹಾಕಿ. ಅದರ ಜೊತೆಗೆ ಹಸಿ ತೆಂಗಿನಕಾಯಿ ತುರಿ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ ಚಟ್ನಿಗೆ ಸೇರಿಸಿದರೆ ರುಚಿಯಾದ ಟೊಮೆಟೊ ಕಾಯಿ ಚಟ್ನಿ ಸಿದ್ಧವಾಗುತ್ತದೆ.

Must Read