ಹೊಸದಿಗಂತ ಡಿಜಿಟಲ್ ಡೆಸ್ಕ್
ಮನೆಗೆ ಬೆಂಕಿ ತಗುಲಿದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ವರ್ಕಲಾದ ದವಳಪುರಂ ಗ್ರಾಮದ ಮನೆಯೊಂದರಲ್ಲಿ ಮುಂಜಾನೆ 1.40 ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಮನೆಯಲ್ಲಿ ಮಲಗಿದ್ದವರು ಮೃತಪಟ್ಟಿದ್ದಾರೆ. ಮೃತರನ್ನು ಕುಟುಂಬದ ಮುಖ್ಯಸ್ಥ ಪ್ರತಾಪನ್ ( 62) , ಶೆರ್ಲಿ (53) ಅಭಿರಾಮಿ (25), ಅಖಿಲ್ (29) ಮತ್ತು ಅಭಿರಾಮಿ ಎಂಟು ವರ್ಷದ ಪುತ್ರ ರಿಯಾನ್ ಎಂದು ಗುರುತಿಸಲಾಗಿದೆ.
ಪ್ರತಾಪನ್ ಹಿರಿಯ ಮಗ ನಿಹುಲ್ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯೆದುರು ನಿಲ್ಲಿಸಿದ್ದ ಐದು ಬೈಕ್ ಗಳು ಸಹ ಅಗ್ನಿಗೆ ಆಹುತಿಯಾಗಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ