ನೀರಿನ ಕ್ವಾರಿಗೆ ಬಿದ್ದು ಒಂದೇ ಕುಟುಂಬದ ಐವರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೀರಿನ ಕ್ವಾರಿ ಒಂದಕ್ಕೆ ಬಿದ್ದು ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ದಾರುಣವಾಗಿ ಮೃತಪಟ್ಟ ಮನಕಲಕುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸಂದಪ್ ಗ್ರಾಮದಲ್ಲಿ ನಡೆದಿದೆ. ಕುಟುಂಬದ ಸದಸ್ಯರ ಜತೆಗೆ ಇದ್ದ ಮಗುವೊಂದು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿತ್ತು. ಅದನ್ನು ರಕ್ಷಿಸಲು ಕುಟುಂಬದ ಎಲ್ಲಾ ಸದಸ್ಯರೂ ನೀರಿಗೆ ಜಿಗಿದಿದ್ದಾರೆ. ಆದರೆ ಮೇಲೆ ಬರಲು ಸಾಧ್ಯವಾಗದೆ ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಮೀರಾ ಗಾಯಕ್ವಾಡ್ (55), ಅವರ ಸೊಸೆ ಅಪೇಕ್ಷಾ (30) ಮತ್ತು ಮೊಮ್ಮಕ್ಕಳಾದ ಮಯೂರೇಶ್ (15), ಮೋಕ್ಷ (13) ಮತ್ತು ನೀಲೇಶ್ (15) ಎಂದು ಗುರುತಿಸಲಾಗಿದೆ. ಇವರೆಲ್ಲರೂ ದೆಸ್ಲೆ ಪಡಾದ ನಿವಾಸಿಗಳಾಗಿದ್ದಾರೆ.
ಗ್ರಾಮಸ್ಥರು ಹೇಳುವ ಪ್ರಕಾರ, ಗ್ರಾಮದಲ್ಲಿ ನೀರಿನ ಅಭಾವದಿಂದ ಕುಟುಂಬ ಸದಸ್ಯರು ಬಟ್ಟೆ ಒಗೆಯಲು ಕ್ವಾರಿಗೆ ತೆರಳಿದ್ದರು. ಮಹಿಳೆಯರು ಬಟ್ಟೆ ಒಗೆಯುತ್ತಿದ್ದಾಗ ಅವರೊಂದಿಗಿದ್ದ ಮಗು ಕ್ವಾರಿಗೆ ಬಿದ್ದಿದ್ದು, ಬಳಿಕ ಆತನನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಆದರೆ ಐವರೂ ನೀರಿನಲ್ಲಿ ಮುಳುಗಿದರು.
ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಡೊಂಬಿವಲಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!