ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಂತೆ ಬಿಂಬಿಸಿಕೊಂಡು ದರೋಡೆ ನಡೆಸುತ್ತಿದ್ದ ಐವರು ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಯೋತ್ಪಾದಕರಂತೆ ಬಿಂಬಿಸಿಕೊಂಡು ದರೋಡೆ ನಡೆಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಐವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಹಲವಾರು ಪ್ರದೇಶಗಳಿಂದ ಬಂದ ದೂರುಗಳ ಮೇರೆಗೆ ಪೊಲೀಸರು ಅವರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಿದ್ದರು ಎಂದು ಅವರು ಹೇಳಿದರು. ಐವರನ್ನು ಹಿಡಿಯಲು ಯರಿಪೋರಾದಲ್ಲಿ ವಿಶೇಷ ಮೊಬೈಲ್ ತಪಾಸಣಾ ಕೇಂದ್ರವನ್ನು ಸಹ ಸ್ಥಾಪಿಸಲಾಗಿತ್ತು ಎಂದು ಅವರು ಹೇಳಿದರು.
ಬಂಧಿತರನ್ನು ನಜೀರ್ ಮುಷ್ತಾಕ್ ಮಲಿಕ್, ಖಾಲಿದ್ ಹುಸೇನ್ ದೀದಾದ್, ರಿಜ್ವಾನ್ ಅಹ್ಮದ್ ದೀದಾದ್, ಕರ್ಮಾನ್ ಅಹ್ಮದ್ ದೀದಾದ್ ಮತ್ತು ಅಬ್ರಾರ್ ಅಹ್ಮದ್ ತೀದ್ವಾ ಎಂದು ಗುರುತಿಸಲಾಗಿದೆ. ಅಪರಾಧ ಕೃತ್ಯಕ್ಕೆ ಬಳಸಿದ್ದ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದರು.
ಅಲ್ಲದೆ, ಎರಡು ಆಟಿಕೆ ಬಂದೂಕುಗಳು, ಒಂದು ಆಟಿಕೆ ಪಿಸ್ತೂಲ್, ಎರಡು ಕಟ್ಟರ್‌ಗಳು, ಐದು ಮೊಬೈಲ್ ಫೋನ್‌ಗಳು ಮತ್ತು ಐದು ಮುಖವಾಡಗಳನ್ನು ಅವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!