ಜೆಸಿಬಿ ಚಾಲಕನ ಅಜಾಗರುಕತೆಯಿಂದ 5 ವರ್ಷದ ಮಗು ಸಾವು

ಹೊಸದಿಂಗತ ಡಿಜಿಟಲ್ ಡೆಸ್ಕ್:

ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಜೆಸಿಬಿ ಹರಿದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಶಬ್ಬೀರ್ ನಗರದಲ್ಲಿ ನಡೆದಿದೆ. ಮನ್ವಿತ್ ಮಂಜುನಾಥ್ ಏರಿಮನಿ(5) ಮೃತಪಟ್ಟ ಮಗು.

ಜೆಸಿಬಿ ಚಾಲಕನ ಅಜಾಗರುಕತೆಯಿಂದ 5 ವರ್ಷದ ಮಗು ಜೀವ ಕಳೆದುಕೊಂಡಿದೆ. ಆಟವಾಡುತ್ತಿದ್ದ ಮಗುವಿನ ಮೇಲೆ ಜೆಸಿಬಿ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ಜೆಸಿಬಿ, ಪಟ್ಟಣದ ಶಬ್ಬೀರ್ ನಗರದಿಂದ ಶಿರಹಟ್ಟಿ ಮಾಗಡಿ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಜೆಸಿಬಿ ಚಾಲಕನ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!