ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶೇ.50 ರಷ್ಟು ರಿಯಾಯಿತಿ ನೀಡಿದೆ. ಜೂನ್ 21ರಿಂದ ಜುಲೈ 10ರವರೆಗೆ ಈ ಸೌಲಭ್ಯ ಜಾರಿಯಲ್ಲಿರಲಿದೆ.
ವಾಹನ ಸವಾರರು ಕರ್ನಾಟಕ ಸ್ಟೇಟ್ ಪೊಲೀಸ್ (KSP) ಆ್ಯಪ್, ಬಿಟಿಪಿ ಅಸ್ತ್ರಂ ಆ್ಯಪ್, ಕರ್ನಾಟಕ ಒನ್ ಕೇಂದ್ರಗಳು, ವೆಬ್‌ಸೈಟ್ ಹಾಗೂ ಸಮೀಪದ ಸಂಚಾರ ಪೊಲೀಸ್ ಠಾಣೆಗಳ ಮೂಲಕ ದಂಡ ಪಾವತಿಸಬಹುದು.
ಇದನ್ನೂ ಓದಿ:
ಬೆಂಗಳೂರು ನಗರದಲ್ಲಿ ದಂಡ ಸಂಗ್ರಹಕ್ಕಾಗಿ 12 ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಹೆಬ್ಬಾಳ, ಹೆಣ್ಣೂರು, ಕುಂದಲಹಳ್ಳಿ, ಮೈಸೂರು ಬ್ಯಾಂಕ್, ಸುಮ್ಮನಹಳ್ಳಿ, ಜಾಲಹಳ್ಳಿ ಕ್ರಾಸ್, ಗೊಟ್ಟಿಗೆರೆ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ ಬಾರಿ ನೀಡಿದ್ದ ರಿಯಾಯಿತಿ ಅವಧಿಯಲ್ಲಿ ಲಕ್ಷಾಂತರ ವಾಹನ ಸವಾರರು ಸೌಲಭ್ಯದ ಪ್ರಯೋಜನ ಪಡೆದಿದ್ದರು. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಪಂದಿಸುವ ನಿರೀಕ್ಷೆ ಇದೆ.
ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ KSP ಅಥವಾ BTP ಅಸ್ತ್ರಂ ಆ್ಯಪ್‌ನಲ್ಲಿ ಬಾಕಿ ದಂಡದ ವಿವರವನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ.



