ಜೋಧಪುರಕ್ಕೆ ಬಂದ 50 ಪಾಕಿಸ್ತಾನಿ ಹಿಂದೂಗಳು ಪೊಲೀಸರ ವಶಕ್ಕೆ, ವಿಚಾರಣೆ ತೀವ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್‌:

ಜೋಧಪುರಕ್ಕೆ ಬಂದು 50 ಪಾಕಿಸ್ತಾನಿ ಹಿಂದೂಗಳನ್ನು ಗುಪ್ತಚರ ಇಲಾಖೆ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ಬಳಿಕ ಮುಂದೆ ಹೋಗಲು ಅವಕಾಶ ನೀಡಿದ್ದಾರೆ.

ಜಮ್ಮು ತಾವಿ ಎಕ್ಸ್‌ಪ್ರೆಸ್ ಮೂಲಕ ಪಾಕಿಸ್ತಾನಿಗಳು ಭಾರತಕ್ಕೆ ಬಂದಿದ್ದಾರೆ. ಎಲ್ಲ ವಿಷಯಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಎಲ್ಲ ಪ್ರಯಾಣಿಕರ ವಿಸಾದಲ್ಲಿ ಜೋಧಪುರಕ್ಕೆ ಪ್ರಯಾಣಿಸುವ ಉಲ್ಲೇಖ ಇಲ್ಲ. ಹಾಗಾಗಿ ಪ್ರಯಾಣಿಕರನ್ನು ತಡೆಹಿಡಿಯಲಾಗಿತ್ತು. ಅವರಿಂದ ಅಗತ್ಯವಾದ ಮಾಹಿತಿ ಪಡೆದು ಮುಂದು ಹೋಗಲು ಅವಕಾಶ ನೀಡಲಾಗಿದೆ.

ಇವರೆಲ್ಲರೂ ತಮ್ಮ ಪರಿಚಯಸ್ಥರು ಹಾಗೂ ನೆಂಟರ ಮನೆಗೆ ಬಂದಿದ್ದಾರೆಂದು ಹೇಳಿದ್ದಾರೆ. ಅವರ ಫೋನ್ ನಂಬರ್, ವಿಳಾಸ ಹಾಗೂ ಎಲ್ಲ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!