ಭಾರತಕ್ಕೆ ಕಾಲಿಟ್ಟ ಇರಾನ್‌ ಹೋರಾಟ: ಕೇರಳದಲ್ಲಿ ಹಿಜಾಬ್ ಗೆ ಬೆಂಕಿಯಿಟ್ಟ ಮುಸ್ಲಿಂ ಮಹಿಳೆಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಹಿಜಾಬ್ ಪರ ಹೋರಾಟಗಳು ನಡೆದು ,ವಿವಾದ ಕೋರ್ಟ್ ಅಂಗಳ ತಲುಪಿದ್ದು, ಇದಾದ ಬಳಿಕ ಹಿಜಾಬ್ ಸಂಬಂಧಿಸಿದಂತೆ ಇರಾನ್ ನಲ್ಲಿ ಕೆಲ ದಿನಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಅನೇಕ ಜನರು ಸೈನಿಕರ ಗುಂಡೇಟಿಗೆ ಬಲಿಯಾಗಿದ್ದಾರೆ. ಆದರೆ ಅಲ್ಲಿ ನಡೆದಿದ್ದು, ಹಿಜಾಬ್ ವಿರೋಧಿ ಪ್ರತಿಭಟನೆಯಾಗಿತ್ತು.

ಇದೀಗ ಈ ಹಿಜಾಬ್ ವಿರೋಧಿ ಚಳುವಳಿ ಕೇರಳಕ್ಕೂ ತಲುಪಿದೆ.ಹೌದು, ಕೇರಳದ ಕೋಝಿಕ್ಕೋಡ್ ನಲ್ಲಿ ಹಿಜಾಬ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ, ಜನರು ಇರಾನ್ ನಲ್ಲಿ ಹಿಜಾಬ್ ವಿರೋಧಿ ಚಳುವಳಿಗೆ ಒಗ್ಗಟ್ಟಿನ ಸಂದೇಶವನ್ನು ನೀಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇರಾನ್ ನಲ್ಲಿ 22 ವರ್ಷದ ಮಹ್ಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಯಾಗಿದ್ದರು. ನಂತರ ದೇಶದಾದ್ಯಂತ ಸರ್ಕಾರದ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹ್ಸಾ ಅವರು ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದ ನೈತಿಕ ಪೊಲೀಸರು ಆಕೆಗೆ ಥಳಿಸಿದ್ದು ಮೃತಪಟ್ಟಿದ್ದು . ಈ ಘಟನೆ ನಂತರ ಇದೀಗ ಇರಾನ್ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇರಾನ್ ನಲ್ಲಿ ಹಿಜಾಬ್ ವಿರೋಧಿ ಆಂದೋಲನವನ್ನು ತಡೆಯುವ ಎಲ್ಲಾ ಪ್ರಯತ್ನಗಳು ವಿಫಲ ಹಿಜಾಬ್ ವಿರೋಧಿ ಪ್ರತಿಭಟನೆಗಳನ್ನು ತಡೆಯಲು ಸರ್ಕಾರ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!