ಟ್ವೀಟರ್‌ ನಲ್ಲಿ 50 ಶೇ. ಸಿಬ್ಬಂದಿ ಕಡಿತ: ಇಂದಿನಿಂದಲೇ ಪ್ರಕ್ರಿಯೆ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟ್ವಿಟರ್‌ ವಶಪಡಿಸಿಕೊಂಡ ಎಲಾನ್‌ ಮಸ್ಕ್‌ ಅವರು ವೆಚ್ಚಕಡಿತದ ಕ್ರಮಗಳಿಗೆ ಮುಂದಾಗಿದ್ದು ಇದರ ಭಾಗವಾಗಿ ತನ್ನ 50ಶೇಕಡಾ ಉದ್ಯೋಗಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಈ ಹಿಂದೆಯೇ ಸ್ಪಷ್ಟನೆ ನೀಡಿದ್ದು ಶುಕ್ರವಾರ (ಇಂದು) ಈ ಕುರಿತು ತನ್ನ ಉದ್ಯೋಗಿಗಳಿಗೆ ತಿಳಿಸುವುದಾಗಿ ಹೇಳಿದೆ.

ಸಿಬ್ಬಂದಿಗಳಿಗೆ ಕಳುಹಿಸಲಾದ ಜ್ಞಾಪಕ ಪತ್ರದ ಪ್ರಕಾರ, ಟ್ವಿಟರ್ ತನ್ನ ಉದ್ಯೋಗಿಗಳಿಗೆ ಶುಕ್ರವಾರ ಬೆಳಿಗ್ಗೆ ಇಮೇಲ್ ಮೂಲಕ ಅವರನ್ನು ವಜಾಗೊಳಿಸಲಾಗುತ್ತದೆಯೇ ಎಂದು ತಿಳಿಸುತ್ತದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್‌ನ ನಿಯಂತ್ರಣವನ್ನು ತೆಗೆದುಕೊಂಡ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ. ಎಷ್ಟು ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ಮೆಮೊ ವಿವರಿಸದಿದ್ದರೂ, ಮಸ್ಕ್ ಟ್ವಿಟರ್‌ನ ಸರಿಸುಮಾರು 7,500-ವ್ಯಕ್ತಿಗಳನ್ನು ಅಂದರೆ ಸರಿಸುಮಾರು ಅರ್ಧದಷ್ಟು ಉದ್ಯೋಗಿಗಳಿಗೆ ಗೇಟ್‌ ಪಾಸ್‌ ನೀಡಲಿದ್ದಾರೆ ಎನ್ನಲಾಗಿದೆ.

ಅಲ್ಲದೇ ಟ್ವಿಟರ್‌ ನ ʼಎಲ್ಲಿಂದಲಾದರೂ ಕೆಲಸʼ ನೀತಿಯನ್ನು ಕೊನೆಗಾಣಿಸಿದ್ದು ಎಲ್ಲ ಉದ್ಯೋಗಿಗಳಿಗೂ ಕಚೇರಿಗೆ ಹಾಜರಾಗುವಂತೆ ಮಸ್ಕ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!