ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದಲ್ಲಿ ಕದನ ವಿರಾಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ, ಉಕ್ರೇನ್‌ನ 500 ಬಿಲಿಯನ್ ಡಾಲರ್ ನಷ್ಟಕ್ಕೆ ಪುಟಿನ್ ಪರಿಹಾರ ನೀಡಬೇಕು ಎಂದು ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಒತ್ತಾಯಿಸಿದ್ದಾರೆ.
ರಷ್ಯಾ ಉದ್ದೇಶಪೂರ್ವಕವಾಗಿ ನಾಶಪಡಿಸಿದ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು ಪರಿಹಾರವನ್ನು ಕೊಡಬೇಕು. ಪಾಶ್ಚಿಮಾತ್ಯ ಹಣಕಾಸು ವ್ಯವಸ್ಥೆಯಲ್ಲಿ 300 ಶತಕೋಟಿ ಡಾಲರ್ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ಯುರೋಪಿನಲ್ಲಿವೆ. ಆದ್ದರಿಂದ ಆ ಆಸ್ತಿಗಳನ್ನು ಉಕ್ರೇನ್‌ಗೆ ಹಸ್ತಾಂತರಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಯುದ್ಧ ಪ್ರಾರಂಭವಾದಾಗ, ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಿದ್ದವು. ಇದರಲ್ಲಿ ರಷ್ಯಾದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದೂ ಸೇರಿದೆ. ಈ ಸ್ವತ್ತುಗಳನ್ನು ಪರಿಹಾರ ಟ್ರಸ್ಟ್‌ಗೆ ಕಳುಹಿಸಬೇಕು, ಅದು ಉಕ್ರೇನ್‌ಗೆ ಪರಿಹಾರ ನೀಡುತ್ತದೆ ಎಂದು ಸುನಕ್ ಹೇಳಿದ್ದಾರೆ.