ಕೇಳಿ.. ಇನ್ಮುಂದೆ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನದ ಫೋಟೋ ಕಳುಹಿಸಿದ್ರೆ 500 ರೂ. ಸಿಗತ್ತೆ..!

ಓದುಗರೆ ಕೇಳಿ.. ಇನ್ಮುಂದೆ ರಸ್ತೆಗಳಲ್ಲಿ ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನದ ಚಿತ್ರವನ್ನು ನೀವು ತೆಗೆದು ಕಳುಹಿಸಿದರೆ ಸರ್ಕಾರ ನಿಮಗೆ 500 ರೂಪಾಯಿಗಳ ಬಹುಮಾನವನ್ನು ನೀಡಲಿದೆ!.
ಹೌದು ಇಂತಹದ್ದೊಂದು ವಿಚಾರವನ್ನು ಖುದ್ದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಂಚಿಕೊಂಡಿದ್ದಾರೆ. ಅವ್ಯವಸ್ಥಿತ ವಾಹನ ನಿಲುಗಡೆ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹೊಸತಾದ ಕಾನೂನನ್ನು ತರಲು ಸರ್ಕಾರ ಯೋಜಿಸುತ್ತಿದೆ.
ಇನ್ನುಂದೆ ನೋ ಪಾರ್ಕಿಂಗ್‌ ನಲ್ಲಿ ವಾಹನ ನಿಲ್ಲಿಸಿದ ವಾಹನ ಮಾಲೀಕರಿಗೆ 1,000 ದಂಡ ವಿಧಿಸಲಾಗುತ್ತಿದೆ. ಈ ಫೋಟೋವನ್ನು ತೆಗೆದು ಕಳುಹಿಸುವವರಿಗೆ ಸರ್ಕಾರದಿಂದ ರೂ 500 ರು. ಬಹುಮಾನ ಸಿಗಲಿದೆ ಎಂದು ಕಾರ್ಯಕ್ರಮವೊಂದರಲ್ಲಿ ಗಡ್ಕರಿ ತಿಳಿಸಿದ್ದಾರೆ. ಸಚಿವರ ಪ್ರಕಾರ, ಟ್ರಾಫಿಕ್ ಜಾಮ್‌ಗೆ ಕಾರಣವಾಗುವ ರಸ್ತೆಗಳಲ್ಲಿ ತಪ್ಪಾಗಿ ವಾಹನಗಳನ್ನು ನಿಲ್ಲಿಸುವ ಅಭ್ಯಾಸವನ್ನು ತಡೆಯುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ತಮ್ಮ ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳನ್ನು ಮಾಡದ ಮತ್ತು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ರಸ್ತೆಗಳನ್ನು ಆಕ್ರಮಿಸಿಕೊಂಡಿರುವ ಜನರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!