ಸ್ನ್ಯಾಕ್ಸ್ ಪ್ಯಾಕೆಟ್‌ನಲ್ಲಿ 500 ರೂಪಾಯಿ ನೋಟು, ನಿಮಿಷಗಳಲ್ಲಿ ಸ್ಟಾಕ್ ಖಾಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಚೂರಿನ ಹುನೂರು ಗ್ರಾಮದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಸ್ನ್ಯಾಕ್ಸ್ ಪ್ಯಾಕೆಟ್‌ಗಳಲ್ಲಿ 500 ರೂಪಾಯಿ ಮುಖಬೆಲೆಯ ನೋಟು ದೊರಕಿದ್ದು, ಗ್ರಾಹಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಐದು ರೂಪಾಯಿ ಸ್ನ್ಯಾಕ್ಸ್ ಪ್ಯಾಕೆಟ್ ಖರೀದಿಸದರೆ 500 ರೂಪಾಯಿ ಸಿಗೋದಾದ್ರೆ ನಮಗೂ ಬೇಕು ಸ್ನ್ಯಾಕ್ಸ್ ಎಂದು ಜನ ಮುಗಿಬಿದ್ದಿದ್ದಾರೆ.

ಸ್ಟಾಕ್ ಖಾಲಿಯಾಗಿ ಮತ್ತೊಂದು ಸ್ಟಾಕ್ ತರಿಸಿದ್ದು, ಇದರಲ್ಲಿ ಯಾವುದೇ ನೋಟು ಪತ್ತೆಯಾಗಿಲ್ಲ. ಮೊದಲು ಒಬ್ಬ ಗ್ರಾಹಕ ಸ್ನ್ಯಾಕ್ಸ್ ಖರೀದಿಸಿದ್ದು, 500 ರೂಪಾಯಿ ನೋಟು ನೋಡಿ ಖುಷಿಯಾಗಿದ್ದರು. ನಂತರ ಮತ್ತೆ ಎರಡು ಪ್ಯಾಕ್ ಖರೀದಿಸಿದ್ದು ಅದರಲ್ಲಿಯೂ ನೋಟುಗಳು ಸಿಕ್ಕಿವೆ. ಇವು ಖೋಟಾ ನೋಟುಗಳೋ ಇಲ್ಲವೋ ಪರಿಶೀಲಿಸಬೇಕಿದೆ. ಮುದ್ಗಲ್ ಪೊಲೀಸರು ಪ್ರಕರಣ ದಾಖಲಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!