52ನೇ ಜಿಎಸ್‌ಟಿ ಕೌನ್ಸಿಲ್ ಸಭೆ: ಸಿರಿಧ್ಯಾನದ ಮೇಲಿನ ಸರಕು-ಸೇವೆ ತೆರಿಗೆ ಇಳಿಸಿದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆದ 52ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ (52nd GST Council Meeting) ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಪುಡಿಮಾಡಿದ ಸಿರಿಧ್ಯಾನದ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) 5% ಕ್ಕೆ ಇಳಿಸಲು ನಿರ್ಧಾರಿಸಲಾಗಿದೆ. ಈ ಹಿಂದೆ ಇವುಗಳ ಮೇಲೆ ಶೇಕಾಡ 18ರಷ್ಟು ತೆರಿಗೆ ಇತ್ತು.

ಶೇಕಾಡ 70 ಅಥವಾ ಅದಕ್ಕಿಂತ ಹೆಚ್ಚಿನ ಸಂಯೋಜನೆ ಹೊಂದಿರುವ ಸಿರಿಧ್ಯಾನಕ್ಕೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಮತ್ತು ಸಿರಿಧ್ಯಾನದ ಬ್ರಾಂಡ್ ಉತ್ಪನ್ನಗಳಿಗೆ ಶೇಕಾಡ 5ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ ಎಂದು ಈ ಸಭೆಯಲ್ಲಿ ಘೋಷಣೆ ಮಾಡಲಾಗಿದೆ.

ಜಿಎಸ್‌ಟಿ ಕೌನ್ಸಿಲ್​​ ಕಬ್ಬಿನ ಉಪ-ಉತ್ಪನ್ನವಾದ ಮತ್ತು ಆಲ್ಕೋಹಾಲ್ ಉತ್ಪಾದನೆಗೆ ಕಚ್ಚಾ ವಸ್ತುವಾಗಿ ಬಳಸಲಾಗುವ ಕಾಕಂಬಿ ( molasses) ಮೇಲಿನ ತೆರಿಗೆ ದರವನ್ನು 18 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ ಎಂದು ಹೇಳಿದೆ.

ಇನ್ನುಕುಡಿಯಲು ಉಪಯೋಗಿಸುವ ಆಲ್ಕೋಹಾಲ್​​ಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ದೆಹಲಿ ಮತ್ತು ಗೋವಾ ರಾಜ್ಯಗಳಲ್ಲಿ ನಡೆಸಲಾಗುವ ಆನ್‌ಲೈನ್ ಗೇಮಿಂಗ್ ಕಂಪನಿಗಳು ಜಿಎಸ್‌ಟಿ ಪಾವತಿಯಲ್ಲಿ ವಂಚನೆ ಮಾಡಿದೆ ಎಂದು ಈ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಕಂಪನಿಗಳ ಮೇಲಿನ ಶುಲ್ಕಗಳ (ತೆರಿಗೆ ಬೇಡಿಕೆ ಸೂಚನೆ) ಬಗ್ಗೆ ಹಿಂದಿನಿಂದ ಸಭೆಯಲ್ಲೇ ಚರ್ಚೆ ನಡೆದಿದೆ ಎಂದು ಟಿಎಸ್ ಸಿಂಗ್ ಡಿಯೋ ಹೇಳಿದ್ದಾರೆ.

51ನೇ ಜಿಎಸ್‌ಟಿ ಕೌನ್ಸಿಲ್​ನಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಇಂದು ಕೆಲವು ತಿದ್ದುಪಡಿಗಳನ್ನು ಮಾಡಲು ಸಭೆ ನಿರ್ಧರಿಸಿದೆ. ಜಿಎಸ್‌ಟಿ ಕೌನ್ಸಿಲ್​​ನ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿಯನ್ನು ಈ ಹಿಂದೆ 65 ರಿಂದ 67 ವರ್ಷಕ್ಕೆ ಸಿಮೀತಗೊಳಿಸಲಾಗಿತ್ತು. ಆದರೆ ಇದೀಗ 67ರಿಂದ 70 ವರ್ಷಗಳವರೆಗೆ ಮುಂದುವರಿಸಲಾಗುವುದು ಎಂದು ಈ ಸಭೆಯಲ್ಲಿ ನಿರ್ಧಾರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!