ಸತತ 55 ಗಂಟೆ ಕಾರ್ಯಾಚರಣೆ: 300 ಅಡಿ ಕೊಳವೆ ಬಾವಿಗೆ ಬಿದ್ದ ಪುಟ್ಟ ಕಂದಮ್ಮ ಬದುಕಲಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಮುಂಗೋಲಿ ಗ್ರಾಮದಲ್ಲಿ 300 ಅಡಿ ಆಳದ ಕೊಳವೆ ಬಾವಿಗೆ (borewell) ಬಿದ್ದಿದ್ದ ಎರಡೂವರೆ ವರ್ಷದ ಮಗುವನ್ನು 55 ಗಂಟೆಗಳ ಕಾರ್ಯಾಚರಣೆ ವ್ಯರ್ಥವಾಗಿದೆ.

ಕೊಳವೆ ಬಾವಿಯಿಂದ ಹೊರತೆಗೆದರೂ ಪುಟ್ಟ ಕಂದನ ಹೊರತೆಗೆದರೂ ಬದುಕುಳಿಯಲಿಲ್ಲ. 300 ಅಡಿ ಕೊಳವೆ ಬಾಗಿ ಬಿದ್ದಿದ್ದ ಸೃಷ್ಟಿ ಕುಶ್ವಾಹ 25ರಿಂದ 30 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು. ಭಾರತೀಯ ಸೇನೆ, ಎನ್‌ಡಿಆರ್‌ಆಫ್ ಸತತ ಪ್ರಯತ್ನ ನಡೆಸಿದರೂ ಪುಟ್ಟ ಕಂದ ಬದುಕಿ ಬರಲಿಲ್ಲ.

ಜೂನ್ 6 ರಂದು ಮಂಗೌಲಿ ಗ್ರಾಮದ ರಾಹುಲ್ ಕುಶ್ವಾಹ ಅವರ ಎರಡೂವರೆ ವರ್ಷದ ಸೃಷ್ಟಿ ಕುಶ್ವಾಹ ಮನೆಯ ಹೊರಗಡೆ ಆಟವಾಡುತಿತ್ತು. ಪುಟ್ಟ ಕಂದಮ್ಮ ಆಟವಾಡುತ್ತಿದ್ದರೆ, ಮನೆಯ ಹೊರ ಜಗಲಿಯಲ್ಲಿ ಅಜ್ಜಿ ಕುಳಿತು ನೋಡುತ್ತಿದ್ದರು. ಆಟವಾಡುತ್ತಲೇ ಇದ್ದಕ್ಕಿದಂತೆ ಕೊಳವೆ ಬಾವಿಗೆ ಬಿದ್ದಿದ್ದಾಳೆ.

ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ, ಡಿಐಜಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತ್ತು. ಬಳಿಕ ಭಾರತೀಯ ಸೇನೆ ಹಾಗೂ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿತ್ತು. ಕಾರ್ಯಾಚರಣೆ ಆರಂಭಿಸಿತ್ತು. ಸತತ ಕಾರ್ಯಾಚರಣೆ ನಡೆಸಿತ್ತು. ಆದರೆ ಕಲ್ಲು ಬಂಡೆಗಳು ಸಿಕ್ಕ ಕಾರಣ ರಕ್ಷಣಾ ಕಾರ್ಯದಲ್ಲೂ ಕೊಂಚ ವಿಳಂಬವಾಗಿತ್ತು.

20 ಅಡಿಯಿಂದ ಸಂಪೂರ್ಣ ಬಂಡೆ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು. ಬಂಡೆ ಕೊರೆಯ ಮಿಷನ್, ಜೆಸಿಬಿ ಸಹಾಯಗಳಿಂದ ರಕ್ಷಣಾ ಕಾರ್ಯ ಮುಂದುವರಿದಿತ್ತು. ಇತ್ತ ಕೊಳವೆ ಬಾವಿ ಮೂಲಕ ಆಮ್ಲಜನಕ ವ್ಯವಸ್ಥೆ ಮಾಡಲಾಗಿತ್ತು. ಇತ್ತ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡೂವರೆ ದಿನಗಳ ಸತತ ಕಾರ್ಯಾಚರಣೆ ಬಳಿಕ ಕಂದನನ್ನು ಕೊಳವೆ ಬಾವಿಯಿಂದ ಹೊರತೆಗೆಯಲಾಗಿತ್ತು. ಅಷ್ಟರಲ್ಲೇ ಪುಟ್ಟ ಕಂದಮ್ಮ ಮೃತಪಟ್ಟಿತ್ತು.

ಪುಟ್ಟ ಕಂದನ ಬದುಕಿಸಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಎಲ್ಲಾ ನೆರವು ನೀಡಿದ್ದರು. ಸ್ಥಳೀಯ ಜಿಲ್ಲಾಡಳಿತ ಜೊತೆ ಮಾತನಾಡಿದ್ದ ಶಿವಾರಾಜ್ ಸಿಂಗ್ ಚವ್ಹಾಣ್ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದರು. ಇತ್ತ ಕೋಟ್ಯಾಂತರ ಜನರು ಸೃಷ್ಟಿ ಬದುಕಿ ಬರಲಿ ಎಂದು ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥನೆ ಫಲಿಸಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!