ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 55 ಮಂದಿಗೆ ಕೋವಿಡ್ ಸೋಂಕು

ಹೊಸದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ (ಫೆ.14) 55 ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೇ ವೇಳೆ 135 ಮಂದಿ ಸೋಮವಾರ ಸೋಂಕು ಮುಕ್ತರಾಗಿದ್ದಾರೆ. ಈ ತನಕ ಜಿಲ್ಲೆಯಲ್ಲಿ 1,35,051 ಸೋಂಕಿನಿಂದ ಹೊರ ಬಂದಿದ್ದಾರೆ.
ಸೋಮವಾರ 2 ಸಾವು ಸಂಭವಿಸಿದೆ. ಇದರಲ್ಲಿ ಒಬ್ಬರು ಹೊರ ಜಿಲ್ಲೆಯವರು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,828 ಕೋವಿಡ್ ಸಾವು ಸಂಭವಿಸಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡದಲ್ಲಿ 730 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ.1.29 ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!