ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಫಲಿತಾಂಶವಾಗಿದ್ದು, ಇಂದು ಮುಖ್ಯಮಂತ್ರಿ ಪಟ್ಟ ಯಾರಿಗೆ ಒಲಿಯಲಿದೆ ಎನ್ನುವ ವಿಷಯ ಬಹಿರಂಗವಾಗಲಿದೆ.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಲ್ಲಿ ಸಾಕಷ್ಟು ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ ಎನ್ನುವ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಹೌದು, ಗೆದ್ದ ಅಭ್ಯರ್ಥಿಗಳ ಪೈಕಿ ಒಟ್ಟಾರೆ ಶೇ.55ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಹೇಳಿದೆ.
2018ರಲ್ಲಿ ಶೇ.37ರಷ್ಟಿದ್ದ ಸಂಖ್ಯೆ ಇದೀಗ ಶೇ.55ಕ್ಕೆ ಏರಿಕೆಯಾಗಿದೆ. ಕ್ರಮಿನಲ್ ಮೊಕದ್ದಮೆ ಹೆಚ್ಚಿರುವ ಪಕ್ಷ ಸದ್ಯಕ್ಕೆ ಕಾಂಗ್ರೆಸ್ ಆಗಿದೆ. ಗೆದ್ದವರಲ್ಲಿ ಒಟ್ಟಾರೆ 78 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.
ಬಿಜೆಪಿ ಎರಡನೇ ಸ್ಥಾನದಲ್ಲಿದ್ದು, 34 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಗೂ ಜೆಡಿಎಸ್ನಿಂದ ಒಂಬತ್ತು ಶಾಸಕರ ಮೇಲೆ ಕೇಸ್ ದಾಖಲಾಗಿದೆ. 122 ಅಭ್ಯರ್ಥಿಗಳ ಪೈಕಿ 71 ಮಂದಿ ವಿರುದ್ಧ ಕೊಲೆ, ಅತ್ಯಾಚಾರದಂಥ ಗಂಭೀರ ಪ್ರಕರಣಗಳು ದಾಖಲಾಗಿವೆ.
ಇನ್ನು ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಡಿ.ಕೆ. ಶಿವಕುಮಾರ್ ಲಂಚ, ಸುಳ್ಳು ಸಾಕಷ್ಟ್ಯ ಸೇರಿದಂತೆ 19 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಸಿಎಂ ಆಕಾಂಕ್ಷಿ ಸಿದ್ದರಾಮಯ್ಯ ಮೇಲೂ 13 ಕೇಸ್ ಇವೆ.