ಕೂದಲಿನ ಆರೋಗ್ಯ ಕಾಪಾಡಲು ಈ ಬೀಜಗಳನ್ನು ನಿಮ್ಮ ಆಹಾರದಲ್ಲಿ ಬಳಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಹುತೇಕರು ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಇದರಿಂದ ಕೂದಲಿಗೆ ಸರಿಯಾದ ಪೋಷಕಾಂಶಗಳು ಸಿಗದೆ ಕೂದಲಿನ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಕೂದಲಿನ ಆರೋಗ್ಯ ಕಾಪಾಡಲು ಈ ಬೀಜಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ನೋಡಿ.

*ಎಳ್ಳು : ಎಳ್ಳನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆ ದೂರವಾಗಿ ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯುತ್ತದೆ.

*ಸೂರ್ಯಕಾಂತಿ ಬೀಜ : ಕೂದಲಿನ ಬುಡವನ್ನು ಗಟ್ಟಿಯಾಗಿಸಿ ಕೂದಲುದುರುವ ಸಮಸ್ಯೆಯನ್ನು ನಿವಾರಿಸುತ್ತದೆ.

*ಕುಂಬಳಕಾಯಿ ಬೀಜ : ಇದರಲ್ಲಿ ಸತು, ತಾಮ್ರ, ಮೆಗ್ನೀಶಿಯಂ, ಕಬ್ಬಿಣ, ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಈ ಬೀಜ ಸೇವನೆಯು ಕೂದಲನ್ನು ಬಲಪಡಿಸುತ್ತವೆ.

*ಅಗಸೆ ಬೀಜ : ಇದರಲ್ಲಿ ಸಾಕಷ್ಟು ಫೈಬರ್, ಪ್ರೋಟೀನ್, ಮೆಗ್ನೀಶಿಯಂ ಮತ್ತು ರಂಜಕವಿದೆ. ಇದು ಕೂದಲುದುರುವ ಸಮಸ್ಯೆಗೆ ರಾಮಬಾಣವಾಗಿದೆ.

*ಮೆಂತ್ಯಕಾಳು : ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದು ಕೂದಲುದುರುವ ಸಮಸ್ಯೆ ದೂರವಾಗಿಸಿ, ದಪ್ಪವಾದ, ಕಪ್ಪಾದ ಕೂದಲು ಬೆಳೆಯಲು ಸಹಕಾರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!