ಚೀನಾ ಗಡಿಯಲ್ಲಿ ಮತ್ತೆ ಭಾರತೀಯ ಸೇನೆಗೆ 5ಜಿ ನೆಟ್​​ವರ್ಕ್​​ ಅಡ್ಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ-ಚೀನಾ ಗಡಿ ಭಾಗದಲ್ಲಿ ಭಾರತೀಯ ಸೈನಿಕರಿಗೆ ಚೀನಾದ 5ಜಿ ನೆಟ್​​ವರ್ಕ್​​ ಉಪಟಳ ಹೆಚ್ಚಾಗಿದೆ.
ಚೀನಾ ಗಡಿ ಪ್ರದೇಶದಲ್ಲಿ 5ಜಿ ನೆಟ್​ವರ್ಕ್​​ ಪರಿಚಯಿಸಿದ್ದು, ಇದರಿಂದ ಭಾರತೀಯ ಸೈನಿಕರ ರೇಡಿಯೋ ಸಂವಹನಕ್ಕೆ ತೀವ್ರ ಅಡ್ಡಿಯುಂಟುಮಾಡುತ್ತಿದೆ. ಜೊತೆಗೆ ಸಂವಹನ ಸಾಧನಗಳಲ್ಲಿ ವಿಚಿತ್ರ ಶಬ್ದ ಕೇಳಿಬರುತ್ತಿದೆ.
ಎಲ್‌ಎಸಿಯಾದ್ಯಂತ 5 ಜಿ ತರಂಗಗಳ ಕಾರಣದಿಂದ ಸಂವಹನ ಸಾಧನಗಳಲ್ಲಿ ವಿಚಿತ್ರವಾದ ಶಬ್ದ ಉಂಟಾಗುತ್ತಿದೆ ಎಂದು ತಿಳಿದುಬಂದಿದ್ದು, ಇದರಿಂದ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.
ಸದ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕೆ-ಬ್ಯಾಂಡ್ ಫ್ರೀಕ್ವೆನ್ಸಿಯನ್ನು ಬಳಸಿಕೊಳ್ಳುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಭಾರತೀಯ ಸೇನಾಪಡೆಗಳಿಗಾಗಿಯೇ ಹೊಸ ಉಪಗ್ರಹ ಉಡಾವಣೆ ಮಾಡುವ ಯೋಜನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!