5ಜಿ ಸ್ಪೆಕ್ಟ್ರಮ್‌ ಹರಾಜು ಯಶಸ್ವಿ: 1.50 ಲಕ್ಷ ಕೋಟಿ ಮೊತ್ತಕ್ಕೆ ಗರಿಷ್ಠ ಬಿಡ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಭಾರತದ ಅತ್ಯಂತ ದೊಡ್ಡ ತರಂಗಾಂತರ ಹರಾಜು ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದೆ. ಈ ಏಳು ದಿನಗಳ ಹರಾಜಿನಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ಟೆಲಿಕಾಂ ತರಂಗಾಂತರದ ದಾಖಲೆ ಮಾರಾಟವಾಗಿದೆ.

ಒಟ್ಟು 1,50,173 ಕೋಟಿ ರೂ.ಗಳ ಬಿಡ್ ಮೊತ್ತದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಅದರಲ್ಲಿ 51,236 MHz ಮಾರಾಟವಾಗಿದೆ. ಬಿಡ್ ಮಾಡಿದ ಒಟ್ಟು ಸ್ಪೆಕ್ಟ್ರಮ್‌ನ 71% ಮಾರಾಟವಾಗಿದೆ. ಆಪರೇಟರ್ ವೈಸ್ ಕ್ವಾಂಟಮ್ – ಅದಾನಿ ಡೇಟಾ ನೆಟ್‌ವರ್ಕ್ಸ್ ಲಿಮಿಟೆಡ್, ಭಾರ್ತಿ ಏರ್‌ಟೆಲ್ Ltd, ರಿಲಯನ್ಸ್ ಜಿಯೋ ಇನ್ಫೋಕಾಮ್ ಭಾಗಿಯಾಗಿವೆ.

ಈ ಹರಾಜಿನಲ್ಲಿ, ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ (ಜಿಯೋ) ಕಂಪನಿಯು ಗರಿಷ್ಠ ಮೊತ್ತದ ಬಿಡ್‌ ಮಾಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಹರಾಜಿನಲ್ಲಿ ಒಟ್ಟು 1,50,173 ಕೋಟಿ ಮೊತ್ತವನ್ನು ಜಿಯೋ ಬಿಡ್‌ ಮಾಡಿದೆ.

ಅದಾನಿ ಡಾಟಾ ನೆಟ್‌ವರ್ಕ್ಸ್ ಲಿಮಿಟೆಡ್ 212 ಕೋಟಿ ರೂ., ಭಾರ್ತಿ ಏರ್‌ಟೆಲ್ ಲಿಮಿಟೆಡ್ 43,084 ಕೋಟಿ ರೂ., ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ 88,078 ಕೋಟಿ ರೂ. ಮತ್ತು ವೊಡಾಫೋನ್-ಐಡಿಯಾ ಲಿಮಿಟೆಡ್ 18,799 ಕೋಟಿ ರೂ.ಗೆ ಬಿಡ್ ಪಡೆದಿವೆ ಎನ್ನಲಾಗಿದೆ.

ಖಾಸಗಿ ಟೆಲಿಕಾಂ ನೆಟ್‌ವರ್ಕ್‌ ಅನ್ನು ಸ್ಥಾಪಿಸಲು ಅದಾನಿ ಗ್ರೂಪ್ 26 MHz ಸ್ಪೆಕ್ಟ್ರಮ್ ಅನ್ನು ಖರೀದಿಸಿದೆ. ಆದರೆ, ಯಾವ ಕಂಪನಿ ಸ್ಪೆಕ್ಟ್ರಮ್ ಖರೀದಿಸಿದೆ ಎಂಬ ವಿವರ ಹರಾಜಿನ ಮಾಹಿತಿ ಸಂಪೂರ್ಣ ಹೊರಬಿದ್ದ ಬಳಿಕವಷ್ಟೇ ತಿಳಿಯಲಿದೆ.

ಸರ್ಕಾರವು 10 ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಅನ್ನು ನೀಡಿತ್ತು, ಆದರೆ 600 MHz, 800 MHz ಮತ್ತು 2300 MHz ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್‌ಗೆ ಯಾವುದೇ ಬಿಡ್‌ಗಳನ್ನು ಸ್ವೀಕರಿಸಲಾಗಿಲ್ಲ. ಸುಮಾರು ಮೂರನೇ ಎರಡರಷ್ಟು ಬಿಡ್‌ಗಳು 5G ಬ್ಯಾಂಡ್‌ಗಾಗಿ (3300 MHz ಮತ್ತು 26 GHz), ಆದರೆ ಬೇಡಿಕೆಯ ಕಾಲು ಭಾಗಕ್ಕಿಂತ ಹೆಚ್ಚಿನವು 700 MHz ಬ್ಯಾಂಡ್‌ನಲ್ಲಿ ಬಂದವು. ಈ ಬ್ಯಾಂಡ್ ಕಳೆದ ಎರಡು ಹರಾಜಿನಲ್ಲಿ (2016 ಮತ್ತು 2021) ಮಾರಾಟವಾಗದೆ ಉಳಿದುಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!