ಮೊರಾಕ್ಕೋದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ: 200ಕ್ಕೂ ಅಧಿಕ ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌

ವಾಷಿಂಗ್ಟನ್‌ನ ಮೊರಾಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 200ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಮೊರಾಕ್ಕೋದ ಮರಕೇಶ್​​ನ ನೈಋತ್ಯಕ್ಕೆ 44 ಮೈಲಿ ದೂರದಲ್ಲಿ ರಾತ್ರಿ 11:11 ಕ್ಕೆ 18.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಅಧಿಕಾರಿಗಳು ಈವರೆಗೂ ಸಾವು ನೋವಿನ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ರಿಕ್ಟರ್‌ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದ್ದು, ಭೂಕಂಪನದಿಂದಾಗಿ ಕಟ್ಟಡಗಳು ಅಲುಗಾಡಿವೆ. ಕೂಡಲೇ ಭಯಭೀತರಾದ ನಿವಾಸಿಗಳು ಮನೆಯಿಂದ ಹೊರನಡೆದಿದ್ದಾರೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಭೂಕಂಪನದ ವೇಳೆ ಸೆರೆ ಹಿಡಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋಗಳಲ್ಲಿ ಭಯಭೀತರಾದ ಜನ ಶಾಪಿಂಗ್ ಸೆಂಟರ್, ರೆಸ್ಟೋರೆಂಟ್‌ಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳಿಂದ ಓಡಿಹೋಗುವುದನ್ನು ಮತ್ತು ಹೊರಗೆ ಓಡಿಹೋಗುತ್ತಿರುವ ದೃಶ್ಯ ಬೆಚ್ಚಿ ಬೀಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!