ಹೊಸದಿಗಂತ ಡಿಜಿಟಲ್ ಡೆಸ್ಕ್:
ನದಿಯಲ್ಲಿ ಸ್ನಾನ ಮಾಡಲು ಹೋಗಿ ಒಂದೇ ಕುಟುಂಬದ 6 ಮಂದಿ ನೀರುಪಾಲಾದ ದಾರುಣ ಘಟನೆ ಗುಜರಾತ್ನ ಖೇಡಾ ಜಿಲ್ಲೆಯ ಮೆಶ್ವೋ ನದಿಯಲ್ಲಿ ನಡೆದಿದೆ.
ಕನಿಜ್ ಗ್ರಾಮದ ಬಳಿಯ ನದಿಯಲ್ಲಿ ಸಂಜೆ ಸ್ನಾನ ಮಾಡಲು ಆರು ಮಂದಿ ತೆರಳಿದ್ದರು. ನೀರಿನ ಆಳ ತಿಳಿಯದೇ ಇಳಿದು ಈಜಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ.
ಅಗ್ನಿಶಾಮಕ ದಳದ ತಂಡವು ಸ್ಥಳಕ್ಕೆ ತಲುಪಿ ನದಿಯಿಂದ ಆರು ಶವಗಳನ್ನು ಹೊರತೆಗೆದಿದೆ, ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖೇಡಾ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.