ಕೋವಿನ್​​ ಪೋರ್ಟಲ್​​ನಲ್ಲಿ ಇನ್ಮುಂದೆ ಒಂದೇ ಮೊಬೈಲ್​ ನಂಬರ್​ನಿಂದ 6 ಸದಸ್ಯರು ನೋಂದಣಿ ಮಾಡಿಕೊಳ್ಳಲು ಅವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಲಸಿಕೆ ಪಡೆಯುವ ಮುನ್ನ ಕೋವಿನ್​​ ಪೋರ್ಟಲ್​​ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆದರೆ ಇದೀಗ ಕೇಂದ್ರ ಸರಕಾರ ಮತ್ತಷ್ಟು ಬದಲಾವಣೆ ಮಾಡಿದ್ದು,
ಇದೀಗ C0WIN ಪೋರ್ಟಲ್​​ನಲ್ಲಿ ಒಂದೇ ಮೊಬೈಲ್​ ನಂಬರ್ ಬಳಕೆ ಮಾಡಿಕೊಂಡು ಆರು ಸದಸ್ಯರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.ಈ ಮೂಲಕ ಲಸಿಕಾಕರಣಕ್ಕೆ ಇದೀಗ ಮತ್ತಷ್ಟು ವೇಗ ನೀಡಲು ಕೇಂದ್ರ ಆರೋಗ್ಯ ಇಲಾಖೆ ಚಿಂತಿಸಿದೆ.
ಈ ಹಿಂದೆ C0WIN ಪೋರ್ಟಲ್​​ನಲ್ಲಿ ಕೇವಲ ನಾಲ್ವರು ಸದಸ್ಯರು ಮಾತ್ರ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿತ್ತು. ಆದರೆ, ಇದೀಗ ಅದರ ಮಿತಿಯನ್ನು 6 ಕ್ಕೆ ಏರಿಸಲಾಗಿದೆ.
ಇದೇ ವೇಳೆ COWIN ಪೋರ್ಟಲ್​​ನಲ್ಲಿ ಕಾಣಿಸಿಕೊಂಡಿದ್ದ ಕೆಲವೊಂದು ಸಮಸ್ಯೆ ಕೂಡ ಬಗೆಹರಿಸಲಾಗಿದ್ದು, ಹೊಸ ವೈಶಿಷ್ಟ್ಯ ಪರಿಚಯಿಸಲಾಗಿದೆ.
ಇನ್ನು ಲಸಿಕೆ ಪಡೆದುಕೊಂಡಿರುವ ಅರ್ಹರ ಪ್ರಮಾಣಪತ್ರದಲ್ಲಿ ಯಾವುದಾದರೂ ದೋಷ ಕಂಡು ಬಂದಿದ್ದರೆ ಅವುಗಳನ್ನ ಸರಿಪಡಿಸಿಕೊಳ್ಳಲುಕೋವಿಡ್ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಏಳು ದಿನಗಳಲ್ಲಿ ಅದನ್ನ ಸರಿಪಡಿಸಲಾಗುವುದು ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!