ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಪುಣೆಯ ಇಂದಾಪುರ ಹಸೀಲ್ ಸಮೀಪದ ಕಲಾಶಿ ಗ್ರಾಮದ ಬಳಿ ಇರುವ ಉಜನಿ ಅಣೆಕಟ್ಟಿನ ನೀರಿನಲ್ಲಿ ದೋಣಿ ಮುಳುಗಿ ಆರು ಮಂದಿ ನಾಪತ್ತೆಯಾಗಿದ್ದಾರೆ.
ಮಂಗಳವಾರ ಸಂಜೆ ದೋಣಿ ಮುಳುಗಿದ ನಂತರ ಮಹಾರಾಷ್ಟ್ರದಲ್ಲಿ ಆರು ಜನರು ನಾಪತ್ತೆಯಾಗಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇವರ ಗುರುತು ಪತ್ತೆಯಾಗಿಲ್ಲ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸ್ಥಳೀಯ ಆಡಳಿತ ಮತ್ತು ಪೊಲೀಸರನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸರು ಬುಧವಾರ ತಿಳಿಸಿದ್ದಾರೆ. ಪ್ರಸ್ತುತ ಉಜನಿ ಅಣೆಕಟ್ಟಿನ ನೀರಿನ ಹರಿವು ಕಡಿಮೆ ಇದೆ. ಉಜನಿಯ ಹೊಟ್ಟೆಯಲ್ಲಿ ಜಲಸಮಾಧಿಯಾಗಿರುವ ಹಲವು ಪುರಾತನ ರಚನೆಗಳು ಮತ್ತು ಪುರಾತನ ದೇವಾಲಯಗಳು ಗೋಚರಿಸಲಾರಂಭಿಸಿವೆ.