ಹೊಸದಿಗಂತ ಡಿಜಿಟಲ್ ಡೆಸ್ಕ್:
55 ಸೆಂಟ್ಸ್ ಸ್ಥಳದಲ್ಲಿ ಬಹು ಮಹಡಿ, ಬರೋಬ್ಬರಿ 60 ಸಾವಿರ ಅಡಿಯ ಕಟ್ಟಡ, ಸಂಪೂರ್ಣ ಕೇರಳ ವಾಸ್ತುಶಿಲ್ಪ ಆಧರಿಸಿದ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ನಿರ್ಮಾಣ!
ಇದು ತಿರುವನಂತಪುರಂನ ಅರಿಸ್ಟೋ ಜಂಕ್ಷನ್‌ನಲ್ಲಿರುವ ಹಳೆಯ ರಾಜ್ಯ ಕಚೇರಿಯ ಸ್ಥಳದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ತಲೆಯೆತ್ತಿರುವ ಕೇರಳ ರಾಜ್ಯ ಬಿಜೆಪಿಯ ಸುಸಜ್ಜಿತ ನೂತನ ಕಚೇರಿ. ಇದು ಇಂದು ಸಾಂಕೇತಿಕವಾಗಿ ಲೋಕಾರ್ಪಣೆಗೊಳ್ಳುತ್ತಿದೆ.
ಇವಿಷ್ಟೇ ಅಲ್ಲ, ಈ ನೂತನ ಕಚೇರಿ ಸೆಂಟ್ರಲ್ ಎಸಿ ವ್ಯವಸ್ಥೆ, 300+ ಸಾಮರ್ಥ್ಯದ ಆಡಿಟೋರಿಯಂ, ಮೀಟಿಂಗ್ ಸೆಂಟರ್, ಮೀಡಿಯಾ ರೂಮ್‌ಗಳು ಮತ್ತು ಡಿಜಿಟಲ್ ಲೈಬ್ರರಿಗಳನ್ನು ಕೂಡಾ ಹೊಂದಿದೆ.
ಇದಕ್ಕೆ ‘ಮಾರಾರ್ಜಿ ಭವನ’ ಎಂದು ನಾಮಕರಣವನ್ನೂ ಮಾಡಲಾಗಿದೆ. ಲೋಕಾರ್ಪಣೆ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾಜಿ ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಇನ್ನೊಂದು ದಿನ ಕಚೇರಿಯ ಅಧಿಕೃತ ಉದ್ಘಾಟನೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಾರಾರ್ಜಿ ಭವನವು ಆಧುನಿಕ ಸುಸಜ್ಜಿತ ಪತ್ರಿಕಾಗೋಷ್ಠಿ ಹಾಲ್‌ಗಳು, ವಾಹಿನಿ ಚರ್ಚೆಗಳಿಗೆ ವಿಶೇಷ ಕೊಠಡಿಗಳು, ಆಹಾರ ಕೇಂದ್ರಗಳು, ವಿಶಾಲವಾದ ರಾಷ್ಟ್ರಪತಿ ಕಚೇರಿ ಮತ್ತು ವಿವಿಧ ಕೋಶಗಳು ಮತ್ತು ಮೋರ್ಚಾಗಳಿಗೆ ಕಚೇರಿಗಳನ್ನು ಕೂಡಾ ಹೊಂದಿದೆ.