ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಇಂದು ರಾಷ್ಟ್ರ ರಾಜಧಾನಿ ತಲುಪುವ ಸಾಧ್ಯತೆಗಳಿವೆ.
ಈ ಪ್ರತಿಭಟನೆಗೆ ತೆರಳುತ್ತಿದ್ದ ಕರ್ನಾಟಕದ 70 ರೈತರನ್ನು ಭೋಪಾಲ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯದ ರೈತರು ದೆಹಲಿ ಕಡೆ ಪ್ರಯಾಣ ಬೆಳೆಸಿದ್ದರು.
ನಿಜಾಮುದ್ದೀನ್ ರೈಲಿನ ಮೂಲಕ ಜಂತರ್ ಮಂತರ್‌ಗೆ ಹೊರಡಲು ರೈತರು ತಯಾರಾಗಿದ್ದರು. ಸದ್ಯಕ್ಕೆ ರೈತರನ್ನು ಕಲ್ಯಾಣ ಮಂಟಪವೊಂದರಲ್ಲಿ ಇರಿಸಲಾಗಿದೆ. ಅಲ್ಲಿಯೂ ರೈತ ವಿರೋಧಿ ಮಧ್ಯಪ್ರದೇಶ ಸರ್ಕಾರಕ್ಕೆ ಧಿಕ್ಕಾರ ಎಂದು ರೈತರು ಘೋಷಣೆ ಕೂಗುತ್ತಿದ್ದಾರೆ.