60 ವರ್ಷ ಭ್ರಷ್ಟಾಚಾರ ನಡೆಸಿದ್ದೇ ಕಾಂಗ್ರೆಸ್ ಆಡಳಿತದ ಬಹುದೊಡ್ಡ ಸಾಧನೆ: ರಾಧಾ ಮೋಹನ್ ಅಗರ್ವಾಲ್

ಹೊಸದಿಗಂತ ಬೀದರ್:

ಕಾಂಗ್ರೆಸ್ ಬಗ್ಗೆ ನೆನೆಸಿದರೆ 60 ವರ್ಷಗಳ ಭ್ರಷ್ಟಾಚಾರ ಲೆಕ್ಕವಿಲ್ಲದಷ್ಟು ಹಗರಣ, ಭಯೋತ್ಪಾದನೆ, ಅಂತರ ಧರ್ಮೀಯ ಕಲಹಗಳು, ಕಾಶ್ಮೀರಿ ಪಂಡಿತರ ಕಗ್ಗೋಲೆ, ಹಾಗೂ ಸಿಖ್ ಹತ್ಯಾಕಾಂಡ ಇವುಗಳೇ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿರುವ ಕೊಡುಗೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್
ವಾಗ್ದಾಳಿ ನಡೆಸಿದರು.

ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ದೃಢ, ಸಮೃದ್ಧ ಸರ್ಕಾರ ನೀಡುವ ಮೂಲಕ ಕಳೆದ 10 ವರ್ಷಗಳಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ದುಡಿದು ಸಮೃದ್ಧ ಭಾರತದ ಕನಸು ನನಸಾಗಿಸಲು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಪಾರದರ್ಶಕ ಸುಭದ್ರ ಸರಕಾರ ಜಗತ್ತಿಗೆ ಮಾದರಿ. ರಾಮ ಮಂದಿರ ನಿರ್ಮಾಣದ ಜೊತೆಗೆ ದೇಶದಲ್ಲಿ ರಾಮರಾಜ್ಯ ಆರಂಭವಾಗಿದೆ ಎಂದು ಹೇಳಿದರು.

ಇನ್ನೂ ಕರ್ನಾಟಕದ 28 ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಸ್ಥಾನ ಪಡೆಯುವ ಮೂಲಕ ಸುಳ್ಳು ಗ್ಯಾರಂಟಿ ಭರವಸೆಗಳ ನೀಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪತನವೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!