ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪೀತ್‌ಬೈಲಿನಲ್ಲಿ ಎಎನ್‌ಎಫ್ ನವರು ನಡೆಸಿದ ಎನ್ ಕೌಂಟರ್ ನಲ್ಲಿ ಹತನಾದ ವಿಕ್ರಂ ಗೌಡನ ವಿರುದ್ದ ಕೊಲೆ ಪ್ರಕರಣವೂ ಸೇರಿದಂತೆ 61 ಪ್ರಕರಣಗಳು ದಾಖಲಾಗಿದ್ದವು ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ಡಿ.ರೂಪಾ ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹತ್ಯೆಯಾದ ನಕ್ಸಲ್ ನಾಯಕ ವಿಕ್ರಂ ಗೌಡ ವಿರುದ್ಧ 61 ಕೇಸ್ಗಳಿವೆ. ಕಾರ್ಯಾಚರಣೆಯಲ್ಲಿ ಎರಡೂ ಕಡೆಯಿಂದ ಗುಂಡಿನಚಕಮಕಿ ಆಗಿದೆ. ಹತ್ಯೆಯಾದ ವಿಕ್ರಂ ಗೌಡ ಮೋಸ್ಟ್ ವಾಂಟೆಡ್ ನಕ್ಸಲನಾಗಿದ್ದ. ವಿಕ್ರಂ ಗೌಡ ವಿರುದ್ಧ ಕೇರಳದಲ್ಲೂ 19 ಕೇಸ್ಗಳಿವೆ. ವಿಕ್ರಂ ಗೌಡನಿಗಾಗಿ ನವೆಂಬರ್ 10ರಿಂದಲೂ ಶೋಧ ನಡೆಸುತ್ತಿದ್ದೆವು. ವಿಕ್ರಂ ಗೌಡನ ಸಾವಿನೊಂದಿಗೆ ಇದು ರಾಜ್ಯದಲ್ಲಿ ನಡೆದ 4ನೇ ಎನ್ಕೌಂಟರ್ ಆಗಿದೆ ಎಂದು ಹೇಳಿದರು.