ರಾಜ್ಯದಲ್ಲಿ 2465 ಕೋಟಿ ಹೂಡಿಕೆಯ ಪ್ರಸ್ತಾವನೆಗೆ ವಾಣಿಜ್ಯ- ಕೈಗಾರಿಕಾ ಇಲಾಖೆ ಅನುಮೋದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆಂಗಳೂರು:
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಮುಂದಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 2465.94 ಕೋಟಿ ಹೂಡಿಕೆಯ ಪ್ರಸ್ತಾವನೆಗೆ‌ ಅನುಮೋದನೆ ನೀಡಿದೆ.
ಕರ್ನಾಟಕ ಉದ್ಯೋಗ ಮಿತ್ರ ಭವನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಉಪಸ್ಥಿತಿಯಲ್ಲಿ ನಡೆದ 131ನೇ ರಾಜ್ಯ ಮಟ್ಟದ ಏಕಗವಾಕ್ಷಿ‌ ಅನುಮೋದನಾ ಸಮಿತಿ ‌ಸಭೆಯಲ್ಲಿ ಈ ಪ್ರಸ್ತಾವನೆಗೆ ಅಂಕಿತ ಬಿದ್ದಿದೆ.

ಯೋಜನೆಗಳ ಬಗ್ಗೆ ವಿವರ:
ಕರ್ನಾಟಕವನ್ನು ಕೈಗಾರಿಕಾ ವಲಯ ಹಾಗೂ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವುದಾಗಿ ನಿರಾಣಿ ಅವರು ತಿಳಿಸಿದ್ದಾರೆ.
ಒಟ್ಟು 60 ವಿವಿಧ ಯೋಜನೆಗಳಿಂದ ಕೈಗಾರಿಕಾ ಕ್ಷೇತ್ರಕ್ಕೆ ₹ 2465.94 ಕೋಟಿ ಬಂಡವಾಳ ‌ಹೂಡಿಕೆಯಾಗಲಿದ್ದು, ಇದರಿಂದ 8575 ಉದ್ಯೋಗಗಳು ಸೃಷ್ಟಿಯಾಗಲಿವೆ.
ಇದರಲ್ಲಿ ₹ 50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ 10 ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳಿಂದಲೇ ಅಂದಾಜು ₹ 1522.33 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 3190 ಜನರಿಗೆ ಉದ್ಯೋಗ ಸಿಗಲಿದೆ ಎಂದು ಸಚಿವ‌ ಮುರುಗೇಶ್ ನಿರಾಣಿ ಅವರು ಮಾಹಿತಿ ನೀಡಿದ್ದಾರೆ.
₹ 15 ಕೋಟೆಯಿಂದ ₹ 50 ಕೋಟೆಯೊಳಗಿನ 49 ಯೋಜನೆಗೆ ಇಲಾಖೆ ಅನುಮತಿಸಿದೆ. ಒಟ್ಟು ‌₹ 938.61 ಕೋಟಿ ಈ ಯೋಜನೆಗಳಿಗೆ ಹೂಡಿಕೆಯಾಗಲಿದ್ದು,5385 ಜನರಿಗೆ ಉದ್ಯೋಗ ಸಿಗಲಿದೆ ಎಂದರು. ಹೆಚ್ಚುವರಿ ಬಂಡವಾಳ ಹೂಡಿಕೆಯ 1 ಯೋಜನೆಗೆ ಸಮಿತಿಯು ಅನುಮೋದನೆ ನೀಡಿದ್ದು, ₹ 5 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.

ಬಂಡವಾಳ ಹೂಡಿಕೆಯಾಗುತ್ತಿರುವ ಯೋಜನೆಗಳು

*ಸಿದ್ದಾರ್ಥ ಸೌಹಾರ್ದ ಸಹಕಾರಿ ನಿಯಮಿತ ₹ 361.15 ಕೋಟಿ ಹೂಡಿಕೆ, 300 ಉದ್ಯೋಗ ಸೃಷ್ಟಿ

*ಗುಡ್ ರಿಚ್ ಏರೋಸ್ಪೇಸ್ ಸರ್ವಿಸಸ್: ಪ್ರೆ.ಲಿ.₹ 255.45 ಕೋಟಿ ಹೂಡಿಕೆ, 1743 ಉದ್ಯೋಗ ‌ಸೃಜನೆ

*ಜಿ.ಬಿ.ಪ್ರೆ.ಲಿ.₹ 235 ಕೋಟಿ ‌ಹೂಡಿಕೆ, 200 ಉದ್ಯೋಗ ಸೃಷ್ಟಿ

*ಶ್ರೀ ಸಿಮೆಂಟ್ ಲಿ.156.17 ಕೋಟಿ ‌ಹೂಡಿಕೆ, 54 ಉದ್ಯೋಗ

*ಡಿಪ್ಯಾಕ್ ವೆಂಚರ್ಚಸ್ ಎಲ್ ಎಲ್ ಪಿ ₹ 112 ಕೋಟಿ ಹೂಡಿಕೆ, 100 ಉದ್ಯೋಗ ‌

*ದಾವಣಗೆರೆ ಶುಗರ್ಸ ಕಂಪನಿ ₹ 99 31 ಕೋಟಿ ಹೂಡಿಕೆ, 77 ಉದ್ಯೋಗ

*ಟೆಮಿಕೊ ಮೋಟಾರ್ ಇಂಡಿಯಾ ಪ್ರೆ.ಲಿ.₹ 88 ಕೋಟಿ , 75 ಉದ್ಯೋಗ

*ಜಯಶ್ರೀ ಎಥನಾಲ್ ಡಿಸ್ಟೀಲೇಷನ್ ಪ್ರೆ.ಲಿ. ₹ 80.25. ಕೋಟಿ ಹೂ., 116 ಉದ್ಯೋಗ

*ಸ್ವಾಜಿ ನ್ಯೂಟ್ರಿಷನಲ್ಸ್ ಪ್ರೆ.ಲಿ. ₹ 51 ಕೋಟಿ 510 ಉದ್ಯೋಗ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಈ. ವಿ‌.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ,ಕೆಐಎಡಿಬಿ ಸಿಇಓ ಶಿವಶಂಕರ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!