ಶೀತ, ಕೆಮ್ಮಿಗೆ ನೀಡುವ ಔಷಧ ಸೇವಿಸಿ 66 ಮಕ್ಕಳು ಸಾವು, ತನಿಖೆಗೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮೂಲದ ಸಂಪನಿ ತಯಾರಿಸಿರುವ ಸಿರಪ್ ಸೇವಿಸಿ ಆಫ್ರಿಕಾದ 66 ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅನಿಮಾನಿಸಿದ್ದು, ತಕ್ಷಣವೇ ತನಿಖೆ ನಡೆಸುವಂತೆ ಕೇಂದ್ರ ಔಷಧ ನಿಯಂತ್ರಕ ಮಂಡಳಿಗೆ ಸೂಚನೆ ನೀಡಿದೆ.

ದೆಹಲಿ ಮೂಲದ ಖಾಸಗಿ ಕಂಪನಿ ಈ ಔಷಧವನ್ನು ತಯಾರಿಸಿದೆ. ಕೆಮ್ಮು, ಶೀತಕ್ಕಾಗಿ ಈ ಸಿರಪ್ ನೀಡಲಾಗಿದ್ದು, ಇದರ ಸೇವನೆಯಿಂದ ಮಕ್ಕಳು ಮೂತ್ರಪಿಂಡ ಸೋಂಕಿಗೆ ಗುರಿಯಾಗಿದ್ದಾರೆ. ಕಂಪನಿ ಸಿರಪ್ ತಯಾರಿಸಿ ಗ್ಯಾಂಬಿಯಾಗೆ ರಫ್ತು ಮಾಡಿತ್ತು. ಇದರಿಂದ ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿದ್ದು, ಈ ಕಂಪನಿ ತಯಾರಿಸು ನಾಲ್ಕು ಸಿರಪ್‌ಗಳ ಮೇಲೆ ತನಿಖೆ ನಡೆಸಲು ಕೋರಿದೆ. ವಿಶ್ವ ಸಂಸ್ಥೆ ಸೂಚನೆ ಮೇರೆಗೆ ತನಿಖೆ ಆರಂಭವಾಗಿದ್ದು, ಶೀಘ್ರವೇ ವರದಿ ನೀಡುವುದಾಗಿ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!