ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 667 ಮಂದಿಗೆ ಕೊರೋನಾ ಪಾಸಿಟಿವ್, 4 ಸೋಂಕಿತರ ಸಾವು

ಹೊಸದಿಗಂತ ವರದಿ,ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ (ಜ.25) 667 ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೇ ವೇಳೆ 773 ಮಂದಿ ಸೋಮವಾರ ಸೋಂಕು ಮುಕ್ತರಾಗಿದ್ದಾರೆ. 4 ಸಾವು ಸಂಭವಿಸಿದೆ. ಎಲ್ಲಾ ನಾಲ್ವರು ದಕ್ಷಿಣ ಕನ್ನಡ ಜಿಲ್ಲೆಯವರು ಎಂದು ಇಲಾಖೆ ಹೇಳಿದೆ.
ದಕ್ಷಿಣ ಕನ್ನಡದಲ್ಲಿ 5,345 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ.10.04 ಆಗಿದೆ. ವೇಣೂರಿನ ಶಾಲೆಯೊಂದರಲ್ಲಿ 11 ಕೋವಿಡ್ ಪಾಸಿಟಿವ್ ಕೇಸುಗಳು ವರದಿಯಾಗಿವೆ. ಶಾಲೆಯನ್ನು ಕಂಟೋನ್ಮೆಂಟ್ ವಲಯವಾಗಿ ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!