66ನೇ ಸಾಲಿನ ಗ್ರ್ಯಾಮಿ ಅವಾರ್ಡ್: ಭಾರತಕ್ಕೆ ಒಲಿದು ಬಂದ ಮೂರು ಪ್ರಶಸ್ತಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

66ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Award) ಪ್ರಶಸ್ತಿ ಪ್ರಕಟವಾಗಿದ್ದು, ಭಾರತಕ್ಕೆ ಮೂರು ಪ್ರಶಸ್ತಿಗಳು ಒಲಿದು ಬಂದಿದೆ.
ದಿ ಮೂಮೆಂಟ್ ಆಲ್ಬಂಗಾಗಿ ಖ್ಯಾತ ಸಂಗೀತಗಾರ ಜಾಕಿರ್ ಹುಸೇನ್ (Zakir Hussain) ಅವರ ಬ್ಯಾಂಡ್ ಶಕ್ತಿಗೆ ಪ್ರಶಸ್ತಿ ಬಂದಿದ್ದು, ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂನಲ್ಲಿ ಈ ಪ್ರಶಸ್ತಿ ಸಂದಿದೆ.

ರಾಕೇಶ್ ಚೌರಾಸಿಯಾಗೆ (Rakesh Chaurasi) ಎರಡು ಗ್ರ್ಯಾಮಿ ಅವಾರ್ಡ್ ದೊರಕಿದ್ದು, ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ ವಾದ್ಯಗಳ ವಿಭಾಗದಲ್ಲಿ ಈ ಎರಡು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಬೇರೆ ಬೇರೆ ಸಂಗೀತಗಾರರು ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!