Thursday, March 23, 2023

Latest Posts

VIRAL VIDEO| ವಯಸ್ಸು 67 ಆದರೂ 16ರ ಉತ್ಸಾಹ : ಅಜ್ಜಿಯ ರೋಪ್ ಸೈಕ್ಲಿಂಗ್ ಪ್ರತಿಭೆ ಮೆಚ್ಚದವರಿಲ್ಲ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅರವತ್ತು ವರ್ಷ ಅಂದ್ರೆ ರಿಟೈರ್‌ಮೆಂಟ್‌ ಸಮಯ. ಮೊಣಕಾಲು ಮತ್ತು ಕೀಲು ನೋವಿನಿಂದ ಬಳಲುತ್ತಾ ರೆಸ್ಟ್‌ ಮಾಡುವ ವಯಸ್ಸು. ಆದರೆ  ಕೇರಳದ ಅಜ್ಜಿಯೊಬ್ಬರು 67ರ ಹರೆಯದಲ್ಲೂ ಮತ್ತೊಬ್ಬರಿಗೆ ಹೊರೆಯಾಗದೆ ತಮ್ಮ ಬದುಕನ್ನು ನಡೆಸುತ್ತಿದ್ದಾರೆ.

ಈ ಇಳಿ ವಯಸಲ್ಲೂ ರೋಪ್‌ ಸೈಕ್ಲಿಂಗ್‌ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ನೆಟ್ಟಿಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆ ಅಜ್ಜಿಯ ಪ್ರತಿಭೆ ಹಾಗೂ ಧೈರ್ಯಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಜ್ಜಿಯ ಸಂಪೂರ್ಣ ವಿವರ ತಿಳಿದಿಲ್ಲವಾದರೂ, ವೀಡಿಯೊ ನೋಡಿದಾಗ ಅವರಿಗಿರುವ ಕಷ್ಟ ಎಂಥದ್ದು ಎಂಬ ಕಲ್ಪನೆ ಬರುತ್ತದೆ. ಹಾಯಾಗಿರಬೇಕಾದ ಸಮಯದಲ್ಲಿ ಸವಾಲಾಗಿರುವ ಕೆಲಸ ಮಾಡೋದು ಸಮಾನ್ಯ ಮಾತಲ್ಲ ಅಂತಿದಾರೆ ನೆಟ್ಟಿಗರು.

https://www.instagram.com/p/CohoXopjt-Z/?utm_source=ig_embed&utm_campaign=embed_video_watch_again

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!