Friday, March 24, 2023

Latest Posts

6,800 ಕೋಟಿ ರೂ. ವೆಚ್ಚದಲ್ಲಿ ಎಚ್‌ಎಎಲ್‌ನಿಂದ 70 ತರಬೇತಿ ವಿಮಾನ ಖರೀದಿಗೆ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ವಾಯುಪಡೆಗಾಗಿ 6,828,36 ಕೋಟಿ ರೂ. ವೆಚ್ಚದಲ್ಲಿ 70 ಎಚ್‌ಟಿಟಿ-40 ಬೇಸಿಕ್ ಟ್ರೈನರ್ ಏರ್‌ಕ್ರಾಫ್ಟ್‌ಗಳನ್ನು ಖರೀದಿ ಮಾಡಲು ಕೇಂದ್ರ ನಿರ್ಧರಿಸಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿಂದ ಏರ್‌ಕ್ರಾಫ್ಟ್‌ಗಳನ್ನು ಖರೀದಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಹೊಸತಾಗಿ ಸೇರ್ಪಡೆಗೊಂಡ ಪೈಲಟ್‌ಗಳ ತರಬೇತಿಗಾಗಿ ಏರ್‌ಕ್ರಾಫ್ಟ್‌ಗಳ ಬಳಕೆ ಮಾಡಲಾಗುತ್ತದೆ ಇದರಿಂದಾಗಿ ಐಎಎಫ್‌ನ ಮೂಲ ತರಬೇತುದಾರ ವಿಮಾನಗಳ ಕೊರತೆ ನೀಗಿಸುತ್ತದೆ.

ಆರು ವರ್ಷಗಳ ಅವಧಿಯಲ್ಲಿ ಈ ವಿಮಾನಗಳನ್ನು ಪೂರೈಕೆ ಮಾಡಲಾಗುವುದು, ಭಾರತೀಯ ಏರೋಸ್ಪೇಸ್ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆಗಳಿವೆ.

ಉತ್ತಮ, ಕಡಿಮೆ ವೇಗದ ನಿರ್ವಹಣೆ ಗುಣಗಳನ್ನು ಹೊಂದುವ ಮತ್ತು ಉತ್ತಮ ತರಬೇತಿ ಪರಿಣಾಮಕಾರಿತ್ವ ಒದಗಿಸುವ ರೀತಿಯಲ್ಲಿ ವಿಮಾನಗಳನ್ನು ವಿನ್ಯಾಸಗೊಳಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!