Tuesday, October 3, 2023

Latest Posts

69 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ‘777 ಚಾರ್ಲಿ’ಗೆ ನ್ಯಾಷನಲ್ ಅವಾರ್ಡ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು (ಆಗಸ್ಟ್ 24) ರಂದು ದೆಹಲಿಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಘೋಷಣೆ ಮಾಡಿದೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಲ್ಲು ಅರ್ಜುನ್​, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಆಲಿಯಾ ಭಟ್ ಹಾಗೂ ಕೃತಿ ಸನೋನ್​ ಪಡೆದುಕೊಂಡಿದ್ದಾರೆ.​

ಕೇಂದ್ರ ಸರ್ಕಾರದ 69ನೇ ರಾಷ್ಟ್ರೀಯ ಚಲನಚಿತ್ರ​ ಪ್ರಶಸ್ತಿಯ ಬೆಸ್ಟ್​ ಫೀಚರ್​ ಸಿನಿಮಾ ವಿಭಾಗದಲ್ಲಿ ರಕ್ಷಿತ್​ ಶೆಟ್ಟಿ ಅಭಿನಯದ 777 ಚಾರ್ಲಿಗೆ ಪ್ರಶಸ್ತಿ ದೊರೆತಿದೆ.
777 ಚಾರ್ಲಿ ಸಿನಿಮಾವನ್ನು ಕಿರಣ್‌ ಕುಮಾರ್‌ ನಿರ್ದೇಶಿಸಿದ್ದು, ಇದು ಫೀಚರ್‌ ಫಿಲ್ಮ್​ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿದೆ.

ತೆಲುಗು ನಟ ಸ್ಟೈಲಿಸ್ಟ್​ ಸ್ಟಾರ್​ ಅಲ್ಲು ಅರ್ಜುನ್​ ಪುಷ್ಪ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.

ಗಂಗೂಬಾಯಿ ಕಥಿಯಾವಾಡಿ ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಸಂಭಾಷಣೆಗಳ ವಿಭಾಗದಲ್ಲಿ ಪ್ರಶಸ್ತಿ ಪಡೆದರೆ, ಇದೇ ಚಿತ್ರಕ್ಕೆ ಆಲಿಯಾ ಭಟ್​ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಿಮಿ ಚಿತ್ರಕ್ಕಾಗಿ ಕೃತಿ ಸನೋನ್​ ಕೂಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ನರ್ಗಿಸ್ ದತ್ ಪ್ರಶಸ್ತಿಯನ್ನು ಗೆದ್ದಿದೆ. ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಿತ್ರಕ್ಕಾಗಿ ಈ ಚಿತ್ರ ನರ್ಗೀಸ್ ದತ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಆರ್​ಆರ್​ಆರ್​ ಜನಪ್ರಿಯ ಸಿನಿಮಾ ಪ್ರಶಸ್ತಿ ಗೆದ್ದರೆ, ಮಾಧವನ್​ ಅಭಿನಯದ ‘ರಾಕೆಟ್ರಿ’ ಅತ್ಯುತ್ತಮ ಚಲನಚಿತ್ರ ಹಾಗೂ ‘ಏಕ್​ ಥಾ ಗಾವೋ’ ಅತ್ಯುತ್ತಮ ನಾನ್​ ಫೀಚರ್​ ಫಿಲ್ಮ್​ ಪ್ರಶಸ್ತಿ ಪಡೆದುಕೊಂಡಿದೆ.

ಪಲ್ಲವಿ ಜೋಶಿ ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ಪಂಕಜ್ ತ್ರಿಪಾಠಿ ‘ಮಿಮಿ’ ಚಿತ್ರದಲ್ಲಿ ನಟನೆಗಾಗಿ ಅತ್ಯುತ್ತಮ ಪೋಷಕ ನಟರಾಗಿ ಆಯ್ಕೆಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!