ಪೆಸಿಫಿಕ್ ಸಾಗರದಲ್ಲಿ 7.1 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯೂ ಕ್ಯಾಲೆಡೋನಿಯಾದ ಪೂರ್ವಕ್ಕೆ ಪೆಸಿಫಿಕ್ ಮಹಾಸಾಗರದಲ್ಲಿ ಶನಿವಾರ 7.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಶುಕ್ರವಾರ ವನವಾಟು ಬಳಿ 7.7 ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ಇದು ಎರಡನೆಯ ಘಟನೆ ಎಂದು ತಿಳಿದಿದೆ. ಪೆಸಿಫಿಕ್ ಸಾಗರದಲ್ಲಿ ಭೂಕಂಪದ ಕೇಂದ್ರವು 35 ಕಿಲೋಮೀಟರ್ (22 ಮೈಲಿ) ಆಳದಲ್ಲಿದೆ, ಇದು ಕ್ಯಾಲೆಡೋನಿಯನ್ ದ್ವೀಪಸಮೂಹದ ಪೂರ್ವಕ್ಕೆ 300 ಕಿಲೋಮೀಟರ್ (190 ಮೈಲಿ) ದೂರದಲ್ಲಿದೆ. ಸುನಾಮಿ ಎಚ್ಚರಿಕೆ ಕೇಂದ್ರವು ಸುನಾಮಿ ಅಲೆಗಳು 0.3 ಮೀಟರ್ ಎಳುವ ಸಾಧ್ಯತೆ ಇದೆ ಎಂದು ಬಹಿರಂಗಪಡಿಸಿದೆ.

ಅಲೆಗಳು ಪೆಸಿಫಿಕ್ ದ್ವೀಪಗಳಾದ ಫಿಜಿ, ಕಿರಿಬಾಟಿ, ವನವಾಟು, ವಾಲಿಸ್ ಮತ್ತು ಫುಟುನಾವನ್ನು ತಲುಪಬಹುದು. ಶುಕ್ರವಾರ, 7.7 ತೀವ್ರತೆಯ ಭೂಕಂಪವು ಅದೇ ಪ್ರದೇಶದಲ್ಲಿ ಅಪ್ಪಳಿಸಿತು, ಬೃಹತ್ ಅಲೆಗಳ ಭಯದಿಂದ ಜನರು ಹಲವಾರು ಪೆಸಿಫಿಕ್ ದ್ವೀಪಗಳಲ್ಲಿ ಎತ್ತರದ ನೆಲಕ್ಕಾಗಿ ಪರದಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!