ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಪಶ್ಚಿಮದಲ್ಲಿ ಮಂಗಳವಾರದಂದು 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇಂಡೋನೇಷ್ಯಾದ ಜಿಯೋಫಿಸಿಕ್ಸ್ ಸಂಸ್ಥೆ (ಬಿಎಂಕೆಜಿ) ಸುನಾಮಿ ಎಚ್ಚರಿಕೆಯನ್ನು ನೀಡಿದೆ.
84 ಕಿಲೋಮೀಟರ್ (52.2 ಮೈಲಿ) ಆಳದಲ್ಲಿ ಸಂಭವಿಸಿದ ಭೂಕಂಪವು ಸುನಾಮಿ ಎಚ್ಚರಿಕೆಯನ್ನು ಉಂಟುಮಾಡಿದೆ ಎಂದು ದೇಶದ ಹವಾಮಾನ ಇಲಾಖೆ ಹೇಳಿದೆ. ಭೂಕಂಪ ಪೀಡಿತ ಪ್ರದೇಶದ ನಿವಾಸಿಗಳಿಗೆ ತೀರದಿಂದ ದೂರವಿರಲು ತಕ್ಷಣವೇ ಸೂಚನೆ ನೀಡುವಂತೆ ಸಂಸ್ಥೆ ಸ್ಥಳೀಯ ಅಧಿಕಾರಿಗಳಿಗೆ ಹೇಳಿದೆ.