ದೇಶದ 8 ಪ್ರಮುಖ ನಗರಗಳಲ್ಲಿ ಮಾರಾಟವಾಗದೇ ಕುಳಿತಿವೆ 7.85 ಲಕ್ಷ ವಸತಿ ಕಟ್ಟಡಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ಪ್ರಮುಖ ಎಂಟು ನಗರಗಳಲ್ಲಿ ಸುಮಾರು 7.85 ಲಕ್ಷ ಸಂಖ್ಯೆಯ ವಸತಿ ಕಟ್ಟಡಗಳು ಮಾರಾಟವಾಗದೇ ಹಾಗೆಯೇ ಉಳಿದಿದ್ದು ಇದರಿಂದ ರಿಯಲ್‌ ಎಸ್ಟೇಟ್‌ ಡೆವಲಪರ್‌ ಗಳು ತೊಂದರೆಯಲ್ಲಿ ಸಿಲುಕಿದ್ದಾರೆ. ಖರೀದಿಸಲು ಗ್ರಾಹಕರು ಮುಂದೆ ಬರುತ್ತಿಲ್ಲದ ಕಾರಣ ಈ ವಸತಿ ಕಟ್ಟಡಗಳನ್ನು ಮಾರಾಟ ಮಾಡಲು ಕನಿಷ್ಟ ಪಕ್ಷ ಸುಮಾರು 32 ತಿಂಗಳು ಸಮಯ ಬೇಕಾಗಬಹುದು ಎನ್ನಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇವುಗಳ ಸಂಖ್ಯೆ ಹೆಚ್ಚಿದ್ದು ಅಮ್ರಪಾಲಿ, ಜೇಪೀ ಇನ್‌ಫ್ರಾಟೆಕ್ ಮತ್ತು ಯುನಿಟೆಕ್‌ನಂತಹ ಅನೇಕ ದೊಡ್ಡ ಬಿಲ್ಡರ್‌ಗಳು ಸುಸ್ತಿದಾರರಾಗುವ ಹಂತಕ್ಕೆ ತಲುಪಿದ್ದಾರೆ ಎನ್ನಲಾಗಿದೆ. ದೆಹಲಿಯೊಂದರಲ್ಲೇ 1 ಲಕ್ಷಕ್ಕೂ ಅಧಿಕ ಕಟ್ಟಡಗಳು ಮಾರಾಟವಾಗದೇ ಖಾಲಿಯಿದ್ದು ಇವುಗಳು ಸಂಪೂರ್ಣವಾಗಿ ಮಾರಾಟವಾಗಲು 62 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಕೆಲ ವರದಿಗಳು ಸೂಚಿಸಿರುವಂತೆ ಮಾರಾಟವಾಗದ ಕಟ್ಟಡಗಳ ಸಂಖ್ಯೆಯು ಸೆಪ್ಟೆಂಬರ್‌ ತಿಂಗಳಿನಲ್ಲಿ 7,85,260 ಕ್ಕೆ ಏರಿಕೆಯಾಗಿದ್ದು ಇದು ಕಳೆದ ತ್ರೈಮಾಸಿಕದಲ್ಲಿ 7,63,650 ರಷ್ಟಿತ್ತು ಎನ್ನಲಾಗಿದೆ.

ಅಹಮದಾಬಾದ್, ದೆಹಲಿ NCR (ದೆಹಲಿ, ಗುರುಗ್ರಾಮ್, ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್, ಮತ್ತು ಫರಿದಾಬಾದ್), ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮೆಟ್ರೋಪೊಲಿಟನ್ ಪ್ರದೇಶ (ಬೋಯಿಸರ್, ಡೊಂಬಿವ್ಲಿ, ಮುಂಬೈ, ಮಜಗಾಂವ್ , ಪನ್ವೆಲ್, ಥಾಣೆ ವೆಸ್ಟ್), ಮತ್ತು ಪುಣೆ ನಗರಗಳಲ್ಲಿ ಈ ರೀತಿಯ ಸಮಸ್ಯೆ ಎದುರಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!