ತಿರುವಣ್ಣಾಮಲೈನಲ್ಲಿ ಭೂಕುಸಿತಕ್ಕೆ 7 ಮಂದಿ ಬಲಿ: ಕುಟುಂಬದವರಿಗೆ ಐದು ಲಕ್ಷ ರೂ. ಪರಿಹಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮಿಳುನಾಡಿನ ದೇವಸ್ಥಾನದ ಪಟ್ಟಣ ತಿರುವಣ್ಣಾಮಲೈನಲ್ಲಿ ಎರಡನೇ ಭೂಕುಸಿತ ಸಂಭವಿಸಿದೆ. ಮೊದಲನೇ ಭೂಕುಸಿತದಲ್ಲಿ ವಸತಿ ಕಟ್ಟಡದ ಮೇಲೆ ಬಂಡೆಯೊಂದು ಕುಸಿದು, ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದರು.

ಭಾರೀ ಮಳೆಯಿಂದಾಗಿ ಪ್ರಸಿದ್ಧ ಅಣ್ಣಾಮಲೈಯಾರ್ ಬೆಟ್ಟದ ಕೆಳಗಿನ ಇಳಿಜಾರುಗಳಲ್ಲಿ ಭಾನುವಾರ ಸಂಜೆ 4:30 ಕ್ಕೆ ಈ ದುರಂತ ನಡೆದಿತ್ತು.ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಭಾರೀ ಮಳೆಯಿಂದ ಅಡಚಣೆಯಾಗಿದೆ.

ಎರಡನೇ ಭೂಕುಸಿತ ಸ್ಥಳೀಯ ದೇವಸ್ಥಾನದ ಬಳಿಯ ಸ್ಥಳದಲ್ಲಿ ಸಂಭವಿಸಿದೆ.ತಿರುವಣ್ಣಾಮಲ್ಲೈನಲ್ಲಿ ಘೋರ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಮಿಳುನಾಡು ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

ರಾಜಕುಮಾರ್ ಎಂಬ ವ್ಯಕ್ತಿಯ ನಿವಾಸದ ಮೇಲೆ ಭಾನುವಾರ ಸಂಜೆ 4 ಗಂಟೆಗೆ ಗುಡ್ಡ ಕುಸಿದಿತ್ತು. ಭಾನುವಾರದಿಂದ ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ ಮುಂದುವರೆದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!