ಇನ್ನು 7 ದಿನ ಪರಪ್ಪನ ಅಗ್ರಹಾರ ಜೈಲೇ ಗತಿ, ರೇವಣ್ಣ ವಿಚಾರಣಾಧೀನ ಕೈದಿ ನಂಬರ್ 4567

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರನ್ನು 17ನೇ ಎಸಿಎಂಎಂ ನ್ಯಾಯಾಲಯ ಏಳು ದಿನಗಳ ಕಾಲ ಮುಂಜಾಗ್ರತಾ ಕ್ರಮವಾಗಿ ಕಸ್ಟಡಿಗೆ ನೀಡಲಾಗಿದೆ.

ಇದರಿಂದಾಗಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದು, ಇದೀಗ ಕಾರಾಗೃಹ ಅಧಿಕಾರಿಗಳು ರೇವಣ್ಣ ಅವರಿಗೆ ತಾತ್ಕಾಲಿಕ ಕೈದಿ ನಂಬರ್ ನೀಡಿದ್ದಾರೆ.

ಜೈಲು ಪ್ರವೇಶಿಸುವ ಎಲ್ಲಾ ಆರೋಪಿಗಳಿಗೆ ಪ್ರವೇಶ ಸಂಖ್ಯೆಯನ್ನು ನೀಡಲಾಗುತ್ತದೆ. ಅದರಂತೆ ರೇವಣ್ಣ ಬಂಧನ ಸಂಖ್ಯೆ 4567 ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!