ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಸೋನ್‌ಪುರ್ ಜಾತ್ರೆಯಲ್ಲಿ ಫೆರ್ರಿಸ್ ವ್ಹೀಲ್‌ನಿಂದ ಬಿದ್ದು ಐವರು ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ವ್ಹೀಲ್‌ನಿಂದ ಒಬ್ಬಾತ ಹೈಟೆನ್ಷನ್ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಆತನಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಅಮನ್ ಖಾನ್‌ಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಹೀಲ್ ನಿರ್ವಾಹಕರಿ, ಸ್ವಿಂಗ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸೋನ್‌ಪುರ ಎಸ್‌ಎಚ್‌ಒ ಸಂಜಯ್ ಕುಮಾರ್ ಹೇಳಿದ್ದಾರೆ. ಜಾತ್ರೆಯ ಪ್ರಮುಖ ಆಕರ್ಷಣೆ 70 ಅಡಿ ಎತ್ತರದ ಫೆರ್ರಿಸ್ ವ್ಹೀಲ್ ಆಗಿದ್ದು, ಹೆಚ್ಚಿನ ಜನ ಅದನ್ನು ಆಡಲು ಬಯಸಿದ್ದರು ಎನ್ನಲಾಗಿದೆ.