Friday, December 8, 2023

Latest Posts

ಮನೆಯಲ್ಲಿದ್ದವರನ್ನು ಬೆದರಿಸಿ 70 ಲಕ್ಷ ರೂ. ಮೌಲ್ಯದ ನಗದು, ಆಭರಣ ಕಳವು

ಹೊಸದಿಗಂತ ವರದಿ ಹುಬ್ಬಳ್ಳಿ:

ಮನೆಯಲ್ಲಿದ್ದವರನ್ನು ಬೆದರಿಸಿ, ಕೈಕಾಲು ಕಟ್ಟಿ 70 ಲಕ್ಷ ರೂ. ಮೌಲ್ಯದ ನಗದು ಹಾಗೂ ಆಭರಣ ಕಳ್ಳತನ ಮಾಡಿದ ಘಟನೆ ಗೋಕುಲ ರಸ್ತೆಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ರಜನೀಕಾಂತ ದೊಡ್ಡಮನಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಹಣವನ್ನು ದೊಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ರಜನೀಕಾಂತ ಅವರ ಮನೆಯ ಕಬ್ಬಿಣದ ಡ್ರಿಲ್ ಕಟ್ ಮಾಡಿ ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದವರನ್ನು ಬೆದರಿಸಿದಷ್ಟೇ ಅಲ್ಲದೇ ಕೈಕಾಲು ಕಟ್ಟಿ ಬಳಿಕ ಮನೆಯಲ್ಲಿದ್ದ 42 ಲಕ್ಷ ರೂ. ಮೌಲ್ಯದ ಆಭರಣ ಹಾಗೂ 25 ಲಕ್ಷ ನಗದು ಸೇರಿದಂತೆ ಒಟ್ಟು 70 ಲಕ್ಷ ರೂ. ಮೌಲ್ಯದ ಹಣ, ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧ ನಡೆಸಲಾಗುತ್ತಿದೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಗಣೇಶ ಹಬ್ಬದ ಅಂಗವಾಗಿ ರಾಣಿಚನ್ನಮ್ಮ ಮೈದಾನದ ಭದ್ರತೆಯಲ್ಲಿ ಪೊಲೀಸರು ಕಾರ್ಯ ನಿರತರಾಗಿದ್ದರು. ಇದೇ ಸಮಯ ಬಳಸಿಕೊಂಡು ಕಳ್ಳರು ಕೈಚಳಕ ತೊರಿಸಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!