SHOCKING | 70 ವರ್ಷದ ಅಜ್ಜಿ ಕಣ್ಣಿಗೆ ಖಾರದಪುಡಿ ಎರಚಿ ರೇಪ್‌ ಮಾಡಿದ ಕ್ರೂರಿ ಕಾಮುಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ದರೋಡೆಗೆಂದು ಮನೆಗೆ ಬಂದಿದ್ದ ಖದೀಮನೊಬ್ಬ ವೃದ್ಧೆಯ ಕಣ್ಣಿಗೆ ಖಾರದಪುಡಿ ಎರಚಿ ಅತ್ಯಾಚಾರ ಎಸಗಿದ್ದಾನೆ.

ದರೋಡೆಗೆಂದು ಮನೆಗೆ ಬಂದಿದ್ದ ಧನೇಶ್​(29) ಎಂಬಾತ ವೃದ್ಧೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಶನಿವಾರ ರಾತ್ರಿ ಮಹಿಳೆಯ ಮೇಲೆ ಮೆಣಸಿನ ಪುಡಿ ಎರಚಿದ ನಂತರ ಕಾಯಂಕುಲಂನಲ್ಲಿರುವ ನಿವಾಸದಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ ಎಂಬುದನ್ನು ಅರಿತ ವ್ಯಕ್ತಿಯು ಆಕೆಯನ್ನು ಗುರಿಯಾಗಿಸಿಕೊಂಡಿದ್ದ. ದುಷ್ಕರ್ಮಿಯು ಮಹಿಳೆಯಿಂದ ಸುಮಾರು ಏಳು ಪವನ್ ಚಿನ್ನವನ್ನು ಕದ್ದಿದ್ದು, ಕದ್ದ ಆಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಹೊರಗಿನಿಂದ ಬಾಗಿಲನ್ನು ಲಾಕ್​ ಮಾಡಿ ಹೊರಟುಹೋಗಿದ್ದ, ಆಕೆಯ ಮೊಬೈಲ್​ ಫೋನ್​ ಕೂಡ ಕದ್ದೊಯ್ದಿದ್ದ ಕಾರಣ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಅವರನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!