ಗೃಹಲಕ್ಷ್ಮಿ ಹಣ ಬಳಸಿ ಇಡೀ ಊರು ಊರಿಗೇ ಹೋಳಿಗೆ ಊಟ ಹಾಕಿಸಿದ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಸಟ್ಟಿ ಗ್ರಾಮದಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಇಡೀ ಊರಿಗೇ ಹೋಳಿಗೆ ಊಟ ಹಾಕಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ವೃದ್ಧ ಮಹಿಳೆಯೊಬ್ಬರು ಇಡೀ ಗ್ರಾಮಕ್ಕ ಊಟ ಹಾಕಿಸಿದ್ದಾರೆ. ಅಕ್ಕತಾಯಿ ಲಂಗೂಟಿ (65) ತಮ್ಮ ಬುದ್ಧಿಮಾಂದ್ಯ ಮಗನೊಂದಿಗೆ ವಾಸಿಸುತ್ತಿದ್ದಾರೆ. ಗೃಹಲಕ್ಷ್ಮಿಯೋಜನೆಯ ಹಣದಲ್ಲಿ ಉತ್ತಮ ಕಾರ್ಯ ಮಾಡುವ ಆಸೆಯಿದ್ದ ಅಕ್ಕತಾಯಿ, ಇಡೀ ಊರಿಗೆ ಊಟ ಹಾಕಿಸಿ ಜನರನ್ನು ಸಂತೃಪ್ತಿಪಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ; ಬಳಿಕ  ಹೇಳಿದ್ದಿಷ್ಟು

ಅಕ್ಕತಾಯಿ ಅವರು ಕೃಷಿ ಹಾಗೂ ಎಮ್ಮೆ ಹಾಲು ಮಾರಾಟ ಮಾಡಿಕೊಂಡು ಜೀವಿಸುತ್ತಿದ್ದು, ಆರ್ಥಿಕವಾಗಿ ಅನುಕೂಲವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಆಧ್ಯಾತ್ಮಿಕ ಜೀವಿಯಾಗಿರುವ ಅಕ್ಕತಾಯಿ, ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಾರೆ. ಗೃಹ ಲಕ್ಷ್ಮಿ ಯೋಜನೆ ಸ್ಥಗಿತಗೊಂಡಾಗ, ಗ್ರಾಮ ದೇವತೆಯಾದ ಅಡವಿ ಲಕ್ಷ್ಮಿ ದೇವಾಲಯಕ್ಕೆ ಹರಕೆ ಹೊತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಹೋಳಿಗೆ, ಸಿಹಿ ಖಾದ್ಯವನ್ನು ತಯಾರಿಸಲು ಅಕ್ಕತಾಯಿ ಇನ್ನಿತರರ ಸಹಾಯವನ್ನೂ ಕೋರಿದ್ದರು. ಅವರಿಂದ ಪ್ರೇರಿತರಾದ ಸುಮಾರು 50 ಮಹಿಳೆಯರು ತಲಾ 100 ರೂ.ಗಳನ್ನು ನೀಡಿದರೆ, ಅಕ್ಕತಾಯಿ ವಿಶೇಷ ಊಟಕ್ಕೆ 10,000 ರೂ ನೀಡಿ, ಸುಮಾರು ಒಂದು ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ. ಇದನ್ನು ಸರ್ಕಾರವೂ ಗುರುತಿಸಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅಕ್ಕತಾಯಿಗೆ ಕರೆ ಮಾಡಿ ಮಾತನಾಡಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!