ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವರ್ಷ ರಾಹುಲ್‌ ಗಾಂಧಿ (Rahul Gandhi) ನಡೆಸಿದ್ದ ಭಾರತ್‌ ಜೋಡೋ (Bharat Jodo) ಯಾತ್ರೆಗೆ ಕಾಂಗ್ರೆಸ್‌ ಬರೋಬ್ಬರಿ 71.8 ಕೋಟಿ ರೂ. ಖರ್ಚು ಮಾಡಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71.8 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್‌ ತನ್ನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಪ್ರಕಟಿಸಿದೆ.

ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಇತ್ತೀಚಿನ ತನ್ನ ವಾರ್ಷಿಕ ವರದಿ ಪ್ರಕಾರ, 2022-23ನೇ ಸಾಲಿನಲ್ಲಿ ಕಾಂಗ್ರೆಸ್‌ನ ಒಟ್ಟು ಆದಾಯವು 452 ಕೋಟಿ ರು.ಗಳಷ್ಟಿದೆ. ಅಂದರೆ ಜೋಡೋ ಯಾತ್ರೆಯ ಒಟ್ಟು ವೆಚ್ಚವು ಕಾಂಗ್ರೆಸ್‌ ಬಳಿ ಇರುವ ಒಟ್ಟು ಮೊತ್ತದ ಶೇ.15.3% ರಷ್ಟಿದೆ.

ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ 2022ರ ಸಪ್ಟೆಂಬರ್‌ನಿಂದ 2023ರ ಜನವರಿವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 4,000 ಕಿ.ಮೀ ಪಾದಯಾತ್ರೆ ಮೂಲಕ ಜೋಡೋ ಯಾತ್ರೆ ಹಮ್ಮಿಕೊಂಡಿದ್ದರು.

ಹಿಂದಿನ ವರ್ಷಕ್ಕೆ ಹೋಲಿಸಿದರೆ, 2022-23ರಲ್ಲಿ ‘ಆಡಳಿತ ಮತ್ತು ಸಾಮಾನ್ಯ ವೆಚ್ಚಗಳ’ ಅಡಿಯಲ್ಲಿ ಕಾಂಗ್ರೆಸ್ ಪಕ್ಷದ ವೆಚ್ಚ 2.6% ಪಟ್ಟು ಹೆಚ್ಚಾಗಿದೆ.

ಒಟ್ಟಾರೆ ವೆಚ್ಚ 2021-22 ಮತ್ತು 2022-23 ಹೋಲಿಕೆ ಮಾಡಿದರೆ 400 ಕೋಟಿ ರೂ. ನಿಂದ 467 ಕೋಟಿ ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ ಪಕ್ಷದ ಆದಾಯವು ಕುಸಿದಿದ್ದು, 2021-22 ರಲ್ಲಿ 541 ಕೋಟಿ ರೂ. ಇದ್ದರೆ 2022-23 ರಲ್ಲಿ 452 ಕೋಟಿ ರೂ.ಗೆ ಇಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!