Friday, June 2, 2023

Latest Posts

ನೂತನ ಸಂಸತ್ ಭವನ ಉದ್ಘಾಟನೆ ವೇಳೆ 75 ರೂಪಾಯಿ ನಾಣ್ಯ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಮೇ.28 ರಂದು ಉದ್ಘಾಟನೆ ಮಾಡಲಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆ ವೇಳೆ 75 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತದೆ. ಈ ನಾಣ್ಯದ ತೂಕ 35 ಗ್ರಾಂ ಇರುತ್ತದೆ. ಈ ನಾಣ್ಯವು ಪ್ರತಿಶತಃ 50ರಷ್ಟು ಬೆಳ್ಳಿಯದ್ದಾಗಿರುತ್ತದೆ. ಇನ್ನುಳಿದ ಪ್ರತಿಶತಃ 50ರಲ್ಲಿ ತಾಮ್ರ, ನಿಕಲ್ ಹಾಗೂ ಉಳಿದ ಲೋಹಗಳು ಇರಲಿವೆ.

ನಾಣ್ಯದಲ್ಲಿ ಯಾವ ಚಿತ್ರವಿದೆ?
ನಾಣ್ಯದ ಹಿಂಭಾಗದಲ್ಲಿ ಅಶೋಕ ಸ್ತಂಭದ ಕೆಳಗೆ 75 ರೂಪಾಯಿ ಮುಖಬೆಲೆ ಹಾಗೂ ಬಲ ಭಾಗದಲ್ಲಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಭಾರತ ಎಂದು ಬರೆಯಲಾಗಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ನೂತನ ಸಂಸತ್ ಭವನದ ಚಿತ್ರವಿದೆ, ಕೆಳಗೆ 2023 ಎಂದು ಬರೆಯಲಾಗಿದೆ. ನೂತನ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಈ ನಾಣ್ಯವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ನೂತನ ಸಂಸತ್ ಭವನ ತ್ರಿಕೋನಾಕಾರದಲ್ಲಿ ವಿನ್ಯಾಸಗೊಂಡಿದ್ದು, 888 ಆಸನಗಳ ವ್ಯವಸ್ಥೆ ಇದೆ. ಇನ್ನು 300ಕ್ಕೂ ಹೆಚ್ಚು ಜನರಿಗೆ ಗ್ಯಾಲರಿಯಲ್ಲಿ ಕೂರುವ ಅವಕಾಶವಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!