ಹೊಸದಿಗಂತ ವರದಿ ಕಲಬುರಗಿ:
ಮನೆಯೊಳಗೆ ಏಕಾಏಕಿ ನುಗ್ಗಿ ವೃದ್ಧೆಯ ಮೇಲೆ ೩೦ ವರ್ಷದ ಕಾಮುಕನೊಬ್ಬ ಅತ್ಯಾಚಾರ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಿಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ 75 ವರ್ಷದ ವೃದ್ಧೆಯ ಮೇಲೆ ಕಾಮುಕ ತಯ್ಯಬ ಫಕೀರ್ (30) ಎಂಬಾತನಿಂದ ಪೈಶಾಚಿಕ ಕೃತ್ಯ ನಡೆದಿದ್ದು,ಈತನು ಊರಿಂದ ಊರಿಗೆ ಭೀಕ್ಷೆ ಬೇಡುತ್ತಾ ಅಲೆಯುತ್ತಿದ್ದನು.
ಮನೆಯಲ್ಲಿ ಒಬ್ಬಂಟಿಯಾಗಿ ಇದ್ದ ವೃದ್ಧೆಯನ್ನು ಕಂಡು ಏಕಾಏಕಿ ಮನೆಗೆ ನುಗ್ಗಿ ಆಕೇಯ ಮೇಲೆ ಅತ್ಯಾಚಾರ ಎಸಗಿದ್ದು, ಅತ್ಯಾಚಾರವೆಸಗಿದ ಬಳಿಕ ಹಣ ಹಾಗೂ ಮೊಬೈಲ್,ನ್ನು ಕಸಿದು ಪರಾರಿಯಾಗಿದ್ದಾನೆ.
ಅತ್ಯಾಚಾರವೆಸಗಿ ಪರಾರಿಯಾಗಿರುವ ಕಾಮುಕ ಫಕೀರ್ ತಯ್ಯಬನ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದು, ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.