ಭಾರತೀಯರ 76.28 ಲಕ್ಷ ವಾಟ್ಸ್‌ಆಪ್ ಖಾತೆ ಬಂದ್: ಯಾಕೆ ಎಂದು ಕಾರಣ ಹೇಳಿದೆ ಕಂಪನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟಾ ಒಡೆತನದ ವಾಟ್ಸ್‌ಆಪ್ ಫೆಬ್ರವರಿ ತಿಂಗಳೊಂದರಲ್ಲಿಯೇ ಭಾರತದಲ್ಲಿ ತನ್ನ 76.28 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಇದಕ್ಕೂ ಹಿಂದಿನ ತಿಂಗಳಿನಲ್ಲಿ ಅದು ನಿಷೇಧಿಸಿದ ಖಾತೆಗಳ ಸಂಖ್ಯೆ 67.28 ಲಕ್ಷ!
ಇಷ್ಟಕ್ಕೂ ವಾಟ್ಸ್‌ಆಪ್ ಯಾಕೆ ತನ್ನ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ? ಇದಕ್ಕೆ ಉತ್ತರ ನೀಡಿದೆ ಸಂಸ್ಥೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿ…

ವಾಟ್ಸ್‌ಆಪ್ ಖಾತೆ ಈ ಕಾರಣಗಳಿಗೆ ಸ್ಥಗಿತಗೊಳ್ಳುತ್ತದೆ…
ಕಂಪನಿಯ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಖಾತೆಗಳನ್ನು ಮುಲಾಜಿಲ್ಲದೆ ನಿಷೇಧಿಸಲಾಗುತ್ತದೆ. ಇನ್ನು ವಾಟ್ಸಾಪ್‌ನಲ್ಲಿ ಅಶ್ಲೀಲ, ದ್ವೇಷಪೂರಿತ, ಕಾನೂನುಬಾಹಿರ, ಮಾನಹಾನಿಕರ, ಬೆದರಿಕೆ, ಬೆದರಿಕೆ, ಕಿರುಕುಳ ಅಥವಾ ಪ್ರಚೋದಿಸುವ ವಿಷಯವನ್ನು ಹಂಚಿಕೊಂಡಲ್ಲಿಯೂ ಖಾತೆ ನಿಷ್ಕ್ರೀಯವಾಗುತ್ತದೆ.

ಭಾರತದಲ್ಲಿ ಈಗ 50 ಕೋಟಿಗೂ ಹೆಚ್ಚು ಬಳಕೆದಾರರು ವಾಟ್ಸಾಪ್ ಅನ್ನು ಬಳಸುತ್ತಿದ್ದು, ಸಂಸ್ಥೆಯು ಕಳೆದ ಫೆಬ್ರವರಿಯಲ್ಲಿ ಒಟ್ಟು 16618 ದೂರುಗಳನ್ನು ಸ್ವೀಕರಿಸಿದೆ. 2021ರ ಐಟಿ ಕಾಯ್ದೆಯ ಅಡಿಯಲ್ಲಿ ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ವಾಟ್ಸ್‌ಆಪ್ ದುರ್ಬಳಕೆ ಮೇಲೆ ಹದ್ದಿನಕಣ್ಣಿಟ್ಟಿರುವ ಸಂಸ್ಥೆ, ಈ ಬಗ್ಗೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!