76ನೇ ಗಣರಾಜ್ಯೋತ್ಸವ ಸಂಭ್ರಮ: ವಿವಿಧತೆಯಲ್ಲಿ ಏಕತೆ, ಇದು ಈ ಬಾರಿಯ ಗೂಗಲ್​-ಡೂಡಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿ ವರ್ಷದಂತೆಯೇ ಗೂಗಲ್ ಈ ಬಾರಿಯೂ ವಿಶೇಷ ಡೂಡಲ್ ರಚಿಸಿದೆ. ಭಾರತದ ಶ್ರೀಮಂತ ಜೀವವೈವಿಧ್ಯವನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರಿದೆ.

ಡೂಡಲ್​ನಲ್ಲಿ ಲಡಾಖಿ ಉಡುಪಿನಲ್ಲಿರುವ ಹಿಮ ಚಿರತೆ, ಧೋತಿ-ಕುರ್ತಾ ಧರಿಸಿರುವ ಹುಲಿ ಮತ್ತು ಭಾರತದ ವಿವಿಧ ಭಾಗಗಳಿಗೆ ಸಂಬಂಧಿಸಿದ ಇತರ ವನ್ಯಜೀವಿಗಳ ಚಿತ್ರಗಳನ್ನು ಒಳಗೊಂಡಿದೆ.

ವೈವಿಧ್ಯಮಯ ಪ್ರಾಣಿಗಳು, ಸಸ್ಯಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿರುವ ಭಾರತದ ಜೀವವೈವಿಧ್ಯಕ್ಕೆ ಇದು ಒಂದು ವಿಶಿಷ್ಟ ಉದಾಹರಣೆಯಾಗಿದೆ. ಗೂಗಲ್ ಡೂಡಲ್ ಮರುಭೂಮಿಗಳು, ಜೌಗು ಪ್ರದೇಶಗಳು, ಹುಲ್ಲುಗಾವಲುಗಳು, ಸರೋವರಗಳು ಮತ್ತು ಸಮುದ್ರಗಳಂತಹ ವಿವಿಧ ನೈಸರ್ಗಿಕ ಪ್ರದೇಶಗಳನ್ನು ಸಹ ಪ್ರದರ್ಶಿಸುತ್ತದೆ, ಇದು ಭಾರತದ ವಿಶಿಷ್ಟ ಭೂದೃಶ್ಯವನ್ನು ಚಿತ್ರಿಸುತ್ತದೆ.

 

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!