Thursday, July 7, 2022

Latest Posts

ಜಗತ್ತಿನಾದ್ಯಂತ ʻ777ಚಾರ್ಲಿʼ ಸಿನಿಮಾ ತೆರೆಗೆ, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಬಹಳ ದೊಡ್ಡ ಗ್ಯಾಪ್‌ ಪಡೆದ ಬಳಿಕ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ʻ777ಚಾರ್ಲಿʼ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿಯಲ್ಲಿ ಕೂಡ ಸಿನಿಮಾ ರಿಲೀಸ್‌ ಆಗಿದ್ದು, ಚಿತ್ರಮಂದಿರಗಳು ಫುಲ್‌ ಆಗಿವೆ.

ಈಗಾಗಲೇ ಪ್ರೀಮಿಯರ್‌ ಶೋ ನೋಡಿರುವ ಅಭಿಮಾನಿಗಳು ಸಿನಿಮಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ವಿಮರ್ಶೆ ಅದ್ಭುತವಾಗಿದ್ದು, ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯವನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಕಟ್ಟುಕೊಟ್ಟಿದ್ದಾರೆ ಅಂತಿದಾರೆ ಪ್ರೇಕ್ಷಕರು. ಹೊರರಾಜ್ಯಗಳಲ್ಲೂ ದೊಡ್ಡ ಮಟ್ಟದ ಪ್ರಮೋಷನ್‌ ಮಾಡಿದ್ದ ಚಿತ್ರತಂಡಕ್ಕೆ ಅಲ್ಲಿಯ ಅಭಿಮಾನಿಗಳ ಮನಸನ್ನೂ ಗೆದ್ದಿದೆ.

ಕೊರೊನಾ ಕಾರಣದಿಂದಾಗಿ ಕಳೆದ ವರ್ಷವೇ ತೆರೆಕಾಣಬೇಕಿದ್ದ ಸಿನಿಮಾ ಮುಂದೂಡಿಕೆಯಾಗಿತ್ತು. ರಕ್ಷಿತ್‌ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ, ರಾಜ್‌ ಬಿ ಶೆಟ್ಟಿ, ಡ್ಯಾನಿಶ್‌ ಸೇಟ್‌ ಅಭಿನಯಿಸಿದ್ದಾರೆ. ಕಿರಣ್‌ ರಾಜ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss