July 30, 2026
Thursday, July 30, 2026
spot_img

ಬಟ್ಟೆ ನೆನೆಸಿದ್ದ ಬಕೆಟ್‌ ನೀರಿಗೆ ಬಿದ್ದು 8 ತಿಂಗಳ ಕಂದಮ್ಮ ದುರಂತ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನ ನಗರದಲ್ಲಿ ಅತ್ಯಂತ ದುಃಖದಾಯಕ ಘಟನೆಯೊಂದು ವರದಿಯಾಗಿದೆ. ಮನೆಯಲ್ಲಿದ್ದ ನೀರಿನ ಬಕೆಟ್‌ಗೆ ಬಿದ್ದು ಎಂಟು ತಿಂಗಳ ಮಗುವೊಂದು ಪ್ರಾಣ ಕಳೆದುಕೊಂಡಿದೆ.

ದಂಪತಿಯ ಮೂರನೇ ಮಗಳು

ಸ್ಥಳೀಯ ಚಿನ್ನದ ಕೆಲಸಗಾರ ಗಿರೀಶ್ ಹಾಗೂ ಚೈತ್ರಾ ದಂಪತಿಯ ಕೊನೆಯ ಮಗಳಾದ ‘ಪುಷ್ಪಾಲೋಚನ’ ಮೃತಪಟ್ಟ ದುರದೃಷ್ಟಕರ ಕಂದಮ್ಮ. ಈ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಪುಷ್ಪಾಲೋಚನ ಮೂರನೆಯವಳಾಗಿದ್ದಳು.

ಅನಾಹುತ ಸಂಭವಿಸಿದ್ದು ಹೇಗೆ?

ತಾಯಿ ಚೈತ್ರಾ ಅವರು ಬಟ್ಟೆಗಳನ್ನು ನೆನೆಸಲು ಬಕೆಟ್‌ನಲ್ಲಿ ನೀರು ತುಂಬಿಟ್ಟು ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ತೆವಳಿಕೊಂಡು ಹೋದ ಮಗು, ಆಕಸ್ಮಿಕವಾಗಿ ಬಕೆಟ್‌ನೊಳಗೆ ಬಿದ್ದು ಉಸಿರುಗಟ್ಟಿ ಕೊನೆಯುಸಿರೆಳೆದಿದೆ ಎಂದು ಶಂಕಿಸಲಾಗಿದೆ.

ಪೋಲಿಸ್ ತನಿಖೆ ಪ್ರಗತಿಯಲ್ಲಿ

ವಿಷಯ ತಿಳಿದ ತಕ್ಷಣ ಪೆನ್ಷನ್ ಮೊಹಲ್ಲಾ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !